ಕೃಷಿ ಇಂಜಿನಿಯರಿಂಗ್ ಮಹಾವಿದ್ಯಾಲಯ, ಜಿಕೆವಿಕೆ, ಬೆಂಗಳೂರು

ಕೃಷಿ ಇಂಜಿನಿಯರಿಂಗ್ ಮಹಾವಿದ್ಯಾಲಯವು ಮೊದಲು ಕೃಷಿ ಮಹಾವಿದ್ಯಾಲಯ, ಜಿಕೆವಿಕೆ ಅಡಿಯಲ್ಲಿ ಕೃಷಿ ಇಂಜಿನಿಯರಿಂಗ್ ವಿಭಾಗವಾಗಿ ಕೆಲಸ ನಿರ್ವಹಿಸಿದ್ದು, ೨೦೧೮ ನೇ ಸಾಲಿನಿಂದ ಮಹಾವಿದ್ಯಾಲಯವಾಗಿ ಉನ್ನತೀಕರಣಗೊಂಡು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ೧೯೬೫ ರ ಪೂರ್ವದಲ್ಲಿ ಕೃಷಿ ಇಂಜಿನಿಯರಿಂಗ್ ವಿಭಾಗವು ಮೊದಲ ಹಂತದಲ್ಲಿ ಬಿ.ಎಸ್ಸಿ. (ಕೃಷಿ) ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದರಲ್ಲಿ ತೊಡಗಿಸಿಕೊಂಡು ಎರಡನೇ ಹಂತದಲ್ಲಿ ಎರಡು ಎಂ.ಎಸ್ಸಿ. (ಕೃಷಿ ಇಂಜಿನಿಯರಿಂಗ್) ಮಣ್ಣು ಮತ್ತು ನೀರು ಸಂರಕ್ಷಣೆ ಇಂಜಿನಿಯರಿಂಗ್ (೧೯೭೪-೭೫) ಮತ್ತು ಎಂ.ಎಸ್ಸಿ (ಕೃಷಿ ಇಂಜಿನಿಯರಿಂಗ್) ಸಂಸ್ಕರಣೆ ಮತ್ತು ಆಹಾರ ಇಂಜಿನಿಯರಿಂಗ್ (೧೯೯೨-೯೩) ಸ್ನಾತ್ತಕೋತ್ತರ ಪದವಿಗಳನ್ನು ಪ್ರಾರಂಭಿಸಲಾಯಿತು, ತದನಂತರ ೨೦೦೧-೦೨ ನೇ ಸಾಲಿನಿಂದ ಎಂ.ಟೆಕ್.(ಕೃಷಿ ಇಂಜಿನಿಯರಿಂಗ್) ಮಣ್ಣು ಮತ್ತು ನೀರು ಸಂರಕ್ಷಣೆ ಇಂಜಿನಿಯರಿಂಗ್ ಮತ್ತು ಎಂ.ಟೆಕ್.(ಕೃಷಿ ಇಂಜಿನಿಯರಿಂಗ್) ಸಂಸ್ಕರಣೆ ಮತ್ತು ಆಹಾರ ಇಂಜಿನಿಯರಿಂಗ್ ಎಂದು ಮರು ಹೆಸರಿಸಲಾಯಿತು. ಕೃಷಿ ಇಂಜಿನಿಯರಿಂಗ್ ವಿಷಯದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ೧೯೯೫-೯೬ ನೇ ಸಾಲಿನಿಂದ ಕೃಷಿ ಮಹಾವಿದ್ಯಾಲಯ, ಜಿಕೆವಿಕೆ ಅಡಿಯಲ್ಲಿ ನಾಲ್ಕು ವರ್ಷದ ಬಿ.ಟೆಕ್ (ಕೃಷಿ ಇಂಜಿನಿಯರಿಂಗ್) ಸ್ನಾತಕ ಪದವಿಯನ್ನು ಪ್ರತ್ಯೇಕವಾಗಿ ಪ್ರಾರಂಭಿಸಲಾಯಿತು.

ಮೂಲಸೌಕರ್ಯ:

ಪ್ರಸ್ತುತ ಕೃಷಿ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಈ ಕೆಳಗೆ ತಿಳಿಸಿರುವ ಮೂರು ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ.

  1. ಮಣ್ಣು ಮತ್ತು ನೀರು ಇಂಜಿನಿಯರಿಂಗ್ ವಿಭಾಗ
  2. ಸಂಸ್ಕರಣೆ ಮತ್ತು ಆಹಾರ ಇಂಜಿನಿಯರಿಂಗ್ ವಿಭಾಗ
  3. ಕೃಷಿ ಯಂತ್ರೋಪಕರಣ ಮತ್ತು ಶಕ್ತಿ ಇಂಜಿನಿಯರಿಂಗ್ ವಿಭಾಗ

ಮೂರು ವಿಭಾಗಗಳು ಸುಸಜ್ಜಿತ ಉಪಕರಣಗಳನ್ನು ಒಳಗೊಂಡ ಪ್ರಾಯೋಗಶಾಲೆಗಳು, ವರ್ಕ್ಶಾಪ್ಗಳು, ವಿಶೇಷ ಸಾಫ್ಟ್ವೇರ್ಗನ್ನೊಳಗೊಂಡ ಕಂಪ್ಯೂಟರ್ ತರಗತಿಗಳ ಸೌಲಭ್ಯಗಳು ಹಾಗೂ ಪತ್ಯೇಕ ಗ್ರಂಥಾಲಯನ್ನು ಒಳಗೊಂಡಿರುತ್ತದೆ.ಕೃಷಿ ಇಂಜಿನಿಯರಿಂಗ್ ಮಹಾವಿದ್ಯಾಲಯವು ಭಾರತ ಸರ್ಕಾರದಿಂದ ಅನುಮೋದನೆಯಾದ ಕೃಷಿ ಯಂತ್ರೋಪಕರಣಗಳ ಪರೀಕ್ಷಣೆ ಕೇಂದ್ರ, ಜೈವಿಕ ಅನಿಲ ಅಭಿವೃದ್ಧಿ ತರಬೇತಿ ಕೇಂದ್ರ ಯುಎಎಸ್ (ಬೆ)- ವಿಎಸ್ಟಿ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಫಾರ್ಮ್ಮೆಕ್ಯಾನೈಸೇಷನ್ ಅಂಡ್ ಸ್ಕಿಲ್ ಡೆವಲಪ್ಮೆಂಟ್, ಸೆಂಟರ್ ಆಫ್ಎಕ್ಸಲೆನ್ಸ್ ಆನ್ ಅಗ್ರಿಕಲ್ಚರಲ್ ಡ್ರೋನ್ಸ್ ಅಂಡ್ ರೋಬೋಟಿಕ್ಸ್; ಮತ್ತು ಲ್ಯಾಬೋರೇಟರಿ ಫಾರ್ಕ್ವಾಲಿಟಿ ಟೆಸ್ಟಿಂಗ್ ಆಫ್ ಮೈಕ್ರೋ ಇರಿಗೇಷನ್ ಕಾಂಪೋನೆಂಟ್ಪ್ರಾ ಯೋಜನೆಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಪರಿಣಿತರಿಂದ ತರಬೇತಿಯನ್ನು ಪಡೆಯಲು ಅನುಕೂಲವಾಗಿರುತ್ತದೆ. ಇದಲ್ಲದೇ ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ ಆವರಣದಲ್ಲಿರುವ ಮುಖ್ಯ ಗ್ರಂಥಾಲಯ, ವಸತಿ ಗೃಹ, ಆಟದ ಮೈದಾನ, ಸಭಾಂಗಣಗಳು, ಕೇಂದ್ರೀಯ ಉಪಕರಣಗಳ ಸೌಲಭ್ಯಗಳು ಮತ್ತು ಉಪಹಾರ ಗೃಹಗಳ ಸೌಲಭ್ಯಗಳನ್ನು ಸಹ ಉಪಯೋಗಿಸಿಕೊಳ್ಳಬಹುದಾಗಿದೆ.

ಪದವಿಗಳು:

ಕೃಷಿ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಪ್ರಸ್ತುತ ನಾಲ್ಕು ವರ್ಷದ ಬಿ. ಟೆಕ್. (ಕೃಷಿ ಇಂಜಿನಿಯರಿಂಗ್) ಸ್ನಾತ್ತಕ ಪದವಿಯನ್ನು ಒಟ್ಟು ೮೯ ವಿದ್ಯಾರ್ಥಿಗಳ ಪ್ರವೇಶಾತಿಯೊಂದಿಗೆ ನೀಡಲಾಗುತ್ತಿದೆ. ಎರಡು ಸ್ನಾತ್ತಕೋತ್ತರ ಪದವಿಗಳಾದ ಎಂ.ಟೆಕ್. ಮಣ್ಣು ಮತ್ತು ನೀರು ಇಂಜಿನಿಯರಿಂಗ್ (೮ ವಿದ್ಯಾರ್ಥಿಗಳ ಪ್ರವೇಶದೊಂದಿಗೆ); ಎಂ.ಟೆಕ್. ಸಂಸ್ಕರಣೆ ಮತ್ತು ಆಹಾರ ಇಂಜಿನಿಯರಿಂಗ್ (೧೩ ವಿದ್ಯಾರ್ಥಿಗಳ ಪ್ರವೇಶದೊಂದಿಗೆ) ಮತ್ತು ಎಂ.ಟೆಕ್. ಕೃಷಿ ಯಂತ್ರೋಪಕರಣ ಮತ್ತು ಶಕ್ತಿ ಇಂಜಿನಿಯರಿಂಗ್(೦೫ ವಿದ್ಯಾರ್ಥಿಗಳ ಪ್ರವೇಶದೊಂದಿಗೆ) ಸ್ನಾತ್ತಕೋತ್ತರ ಪದವಿಗಳು ಕಾರ್ಯರೂಪದಲ್ಲಿರುತ್ತವೆ. ಕೃಷಿ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಕೃಷಿ ಇಂಜಿನಿಯರಿಂಗ್ ಸ್ನಾತ್ತಕ ಮತ್ತು ಸ್ನಾತ್ತಕೋತ್ತರ ಪದವಿಗಳನ್ನು ಬೋಧನೆ ಮಾಡುವುದಲ್ಲದೇ ಕೃಷಿ ಮಹಾವಿದ್ಯಾಲಯ ಜಿಕೆವಿಕೆ ಅಡಿಯಲ್ಲಿರುವ ಬಿ.ಎಸ್ಸಿ.(ಹಾನರ್ಸ್) ಕೃಷಿ; ಬಿ.ಎಸ್ಸಿ.(ಹಾನರ್ಸ್) ಎಬಿಎಂ ಮತ್ತು ಬಿ.ಎಸ್ಸಿ.(ಹಾನರ್ಸ್) ಆಹಾರ ಪೋಷಣೆ ಮತ್ತು ಪದ್ದತಿ ಪದವಿ ವಿದ್ಯಾರ್ಥಿಗಳ ಪಠ್ಯಕ್ರಮಗಳನ್ನು ಸಹ ಬೋಧನೆ ಮಾಡಲಾಗುತ್ತಿದೆ.

ಬಿ. ಟೆಕ್ (ಕೃಷಿ ಇಂಜಿನಿಯರಿಂಗ್) ಪದವಿ:

ಕೃಷಿ ಇಂಜಿನಿಯರಿಂಗ್ ಪದವಿಯನ್ನು ನಾಲ್ಕು ವರ್ಷಗಳ ಕಾಲ ಅವಧಿಯಲ್ಲಿ (೮ ಸೆಮಿಸ್ಟರ್)ಬೋಧನೆ ಮಾಡಲಾಗುತ್ತದೆ. ಈ ಪದವಿಯಲ್ಲಿ ವಿವಿಧ ವಿಷಯಗಳಾದ ಕೃಷಿ ಯಂತ್ರೋಪಕರಣ ಮತ್ತು ಶಕ್ತಿ ಇಂಜಿನಿಯರಿಂಗ್, ಮಣ್ಣು ಮತ್ತು ನೀರು ಇಂಜಿನಿಯರಿಂಗ್; ಸಂಸ್ಕರಣೆ ಮತ್ತು ಆಹಾರ ಇಂಜಿನಿಯರಿಂಗ್ ಹಾಗೂ ನವೀಕರಿಸಬಹುದಾದ ಶಕ್ತಿಯ ಮೂಲಗಳು, ವಿಷಯಗಳಲ್ಲದೇ ಬೇಸಿಕ್ ಇಂಜಿನಿಯರಿಂಗ್ ಮತ್ತು ಅಪ್ಲೆಡ್ ಸೈನ್ಸ್ (ಕೃಷಿ,ತೋಟಗಾರಿಕೆ ಮತ್ತು ಮಾರುಕಟ್ಟೆಗೆ) ಸಂಬಂಧಿಸಿದ ಪಠ್ಯಕ್ರಮಗಳನ್ನು ಬೋಧನೆ ಮಾಡಲಾಗುತ್ತದೆ.

ಪ್ರಮುಖ ಅಂಶಗಳು:

ಬಿ.ಟೆಕ್.(ಕೃಷಿ ಇಂಜಿನಿಯರಿಂಗ್) ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದ ಅನುಸಾರ ಸುಮಾರು ಒಂದು ವರ್ಷ ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ತರಭೇತಿ ಸಂಸ್ಥೆಗಳಾದ ಜೈನ್ಇರಿಗೇಷನ್ ಸಿಸ್ಟಮ್ಸ್ ಲಿ.,ಮಹಾರಾಷ್ಟ್ರ ; ಐಸಿಎಆರ್-ಸಿಐಎಇ, ಬೋಪಾಲ್; ಐಸಿಎಆರ್-ಸಿಐಪಿಹೆಚ್ಇಟಿ, ಎನ್ಐಎಫ್ಟಿಇಎಂ, ತಾಂಜಾವೂರ್; ಎಸ್. ಆರ್.ಎಫ್. ಎಂ.ಟಿ.ಟಿ.ಐ. ಅನಂತಪುರ, ಐಸಿಎಆರ್- ಐ.ಐ.ಎಸ್.ಡಬ್ಲೂ.ಸಿ, ಡೆಹರಡ್ಯೂನ್ವ್; ವಿಎಸ್ ಟಿಟಿಲ್ಲರ್ಸ್ಟ್ರಯಕ್ಟರ್ಸ್ ಲಿ., ತರಬೇತಿಯನ್ನು ಪಡೆಯುತ್ತಾರೆ. ಅಲ್ಲದೇ ಗ್ರಾಮೀಣ ಜಾಗೃತಿ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳು ವಿವಿಧ ಹಳ್ಳಿಗಳಲ್ಲಿ ಕೆಲಸ ಮಾಡಿ ಅನುಭವ ಪಡೆಯುತ್ತಾರೆ.

  • ಬಿ.ಟೆಕ್ (ಕೃಷಿ ಇಂಜಿನಿಯರಿಂಗ್) ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಶೈಕ್ಷಣಿಕ ಪ್ರವಾಸ ಪಠ್ಯಕ್ರಮದ ಅಡಿಯಲ್ಲಿ ವಿವಿಧ ಶಿಕ್ಷಣ / ತರಬೇತಿ ಸಂಸ್ಥೆಗಳಿಗೆ ಮತ್ತು ಇಂಡಸ್ಟಿಸ್ಗಳಗೆಳಿಗೆ ಭೇಟಿ ನೀಡುತ್ತಾರೆ.
  • ಬಿ. ಟೆಕ್. (ಕೃಷಿ ಇಂಜಿನಿಯರಿಂಗ್) ಪದವೀಧರರು ಸಾಮಾನ್ಯವಾಗಿ ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಕೃಷಿ ಇಲಾಖೆಗಳು, ಸರ್ಕಾರದ ವಿವಿಧ ಇಲಾಖೆಗಳು, ಕೇಂದ್ರ ಸರ್ಕಾರದ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರಗಳು, ಕರ್ನಾಟಕ ಲೋಕ ಸೇವಾ ಆಯೋಗ, ಭಾರತಲೋಕಾ ಸೇವಾಆಯೋಗ, ಬ್ಯಾಂಕ್ ಹಾಗೂ ಇನ್ನೂ ಇತರೆ ಕೃಷಿಗೆ ಸಂಬಂಧಪಟ್ಟ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಅವಕಾಶವಿರುತ್ತದೆ.
  • ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಬಿ. ಟೆಕ್ (ಕೃಷಿ ಇಂಜಿನಿಯರಿಂಗ್) ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆ.ಆರ್.ಎಫ್, ಎಸ್.ಆರ್. ಎಫ್, ಗೇಟ್, ಸಿ.ಎ.ಟಿ, ಎನ್.ಇ. ಟಿ, ಜಿ. ಆರ್. ಇ, ಟಿ.ಒ.ಇ.ಎಫ್.ಎಲ್, ಐ.ಇ.ಎಲ್.ಟಿ,ಎಸ್, ಮುಂತಾದ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐ.ಐ.ಟಿಗಳು, ಐ.ಎ.ಆರ್.ಐ ಗಳು, ಐ.ಐ.ಎಂ ಮತ್ತು ಐ.ಐ.ಎಸ್.ಸಿ, ಗಳಲ್ಲಿ ಉನ್ನತ ಶಿಕ್ಷಣಭ್ಯಾಸವನ್ನು ಪಡೆಯುತ್ತಿರುತ್ತಾರೆ.
  • ಭಾರತೀಯ ಕೃಷಿ ಅನುಸಂದಾನ ಪರಿಷತ್, ನವದೆಹಲಿ (ಐ.ಸಿ.ಎ.ಆರ್) ನಡೆಸುವ ಕಿರಿಯ ಸಂಶೋಧನಾ ಸಹಚರ (ಜೆ.ಆರ್.ಎಫ್) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಸತತ 3 ವರ್ಷಗಳಿಂದ ಕೃಷಿ ಇಂಜಿನಿಯರಿಂಗ್ ಮಹಾವಿದ್ಯಾಲಯವು ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಷಯದಲ್ಲಿ ಮೊದಲನೇ ಸ್ಥಾನವನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ನಮ್ಮ ಬಿ. ಟೆಕ್ (ಕೃಷಿ ಇಂಜಿನಿಯರಿಂಗ್) ವಿದ್ಯಾರ್ಥಿಗಳು ರಾಷ್ಟಿಯ ಮಟ್ಟದಲ್ಲಿ ನೀಡುವ ಕೃಷಿ ಇಂಜಿನಿಯರಿಂಗ್  ತಾಂತ್ರಿಕತೆ ವಿಭಾಗದಿಂದ ಅತೀ ಹೆಚ್ಚು ಸ್ನಾತ್ತಕೋತ್ತರ ವಿದ್ಯಾರ್ಥಿ ವೇತನ ಪಡೆದು ಮೊದಲ ರಾಂಕ್ ಗಳಿಸಿದ್ದಾರೆ.
ಸಂಪರ್ಕಿಸಿ:

ಡಾ. ಎಚ್.ಜಿ. ಅಶೋಕ
ವಿಶೇಷ ಅಧಿಕಾರಿಗಳು
ಕೃಷಿ ಇಂಜಿನಿಯರಿಂಗ್ ಮಹ್ಹಾ ವಿದ್ಯಾಲಯ
ಕೃ.ವಿ.ವಿ., ಜಿಕೆವಿಕೆ, ಬೆಂಗಳೂರು-560065
+91-080-23330153 Extn. 332
Ph. No.: 9449866920
specialofficercoae@gmail.com ; cae@uasbangalore.edu.in

ಮಣ್ಣು ಮತ್ತು ನೀರುಇಂಜಿನಿಯರಿಂಗ್ ವಿಭಾಗ

ಡಾ. ಕೆ. ಎಸ್. ರಾಜಶೇಖರಪ್ಪ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ,
ಎಂ.ಎಸ್ಸಿ (ಕೃಷಿ) ಮಣ್ಣು ಮತ್ತು ನೀರು ಸಂರಕ್ಷಣೆ ಇಂಜಿನಿಯರಿಂಗ್
ಪಿಹೆಚ್. ಡಿಮಣ್ಣು ಮತ್ತು ನೀರು ಸಂರಕ್ಷಣೆ ಇಂಜಿನಿಯರಿಂಗ್
Specialization: ಮಣ್ಣು ಮತ್ತು ನೀರು ಸಂರಕ್ಷಣೆ ಇಂಜಿನಿಯರಿಂಗ್
081-72221166
+91-9480376256
081-72221166
ಡಾ. ಬಿ.ಸಿ. ರವಿಕುಮಾರ್
ಪ್ರಾಧ್ಯಾಪಕರು
ಎಂ.ಎಸ್ಸಿ (ಕೃಷಿ), ಪಿಹೆಚ್.ಡಿ ಬಯೋ– ಕೃಷಿ ಇಂಜಿನಿರಿಂಯಗ್, ಕೆ.ಎಸ್.ಯು(ಯು.ಎಸ್.ಎ)
Specialization: ಜಿ.ಐ.ಎಸ್‌ಕೋರ್ಸ್ ನಲ್ಲಿ ಪದವಿ ಪ್ರಮಾಣಪತ್ರ ,ಜಲಾನಯನಮಾದರಿ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಜಿ.ಐ.ಎಸ್ ಮತ್ತು ದೂರ ಸಂವೇದಿ
+91-99014 49151
ಡಾ. ಅನಿಲ್ಕುಮಾರ್ ಟಿ ದಂಡೇಕರ್
ಪ್ರಾಧ್ಯಾಪಕರು
•ಎಂ.ಟೆಕ್ ಮಣ್ಣು ಮತ್ತು ನೀರು ಸಂರಕ್ಷಣೆಇAಜಿನಿಯರಿAಗ್, ಕೃವಿವಿ, ಬೆಂಗಳೂರು
• ಪಿಹೆಚ್.ಡಿ.(ಕೃಷಿಇಂಜಿನಿಯರಿAಗ್)- ಮಣ್ಣು ಮತ್ತು ನೀರು ಸಂರಕ್ಷಣೆ ಇಂಜಿನಿಯರಿAಗ್, ಐ.ಎ.ಆರ್.ಐ, ಪೂಸ, ನವದೆಹಲಿ
• ಕೃಷಿ ವಿಸ್ತರಣ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮ, ಎಂ.ಎ.ಎನ್. ಎ.ಜಿ.ಇ, ಹೈದರಬಾದ್
• ಭೌದ್ಧಿಕ ಆಸ್ತಿ ಹಕ್ಕು ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮ, ಅಣ್ಣಮಲೈ ವಿಶ್ವವಿದ್ಯಾನಿಲಯ, ತಮಿಳುನಾಡು
Specialization: ಹೈಡ್ರಾಲಾಜಿಕಲ್ ಮಾಡೆಲಿಂಗ್, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಜಿ.ಐ.ಎಸ್ ಮತ್ತು ದೂರ ಸಂವೇದಿ, ಅಂತರ್ಜಲ ಹೈಡ್ರಾಲಜಿ, ಮಣ್ಣು ಮತ್ತು ನೀರು ಸಂರಕ್ಷಣೆ ಇಂಜಿನಿಯರಿAಗ್/ ಜಲಾನಯನ ಹೈಡ್ರಾಲಜಿ
aniluasb@gmail.com, dandekaranil@uasbangalore.edu.in
+91 9620225175
ಡಾ. ಪ್ರೇಮಾನಂದ ಬಿ. ದಶವಂತ್
ಪ್ರಾಧ್ಯಾಪಕರು
ಪಿಹೆಚ್.ಡಿ–ಕೃಷಿ ಇಂಜಿನಿಯರಿಂಗ್,
ಎಂ.ಟೆಕ್ ಮಣ್ಣು ಮತ್ತು ನೀರು ಸಂರಕ್ಷಣೆ ಇಂಜಿನಿಯರಿಂಗ್
ಟೆಕ್ಸಸ್ ಎ ಎಂ ವಿಶ್ವವಿದ್ಯಾನಿಲಯ, ಬ್ರಾಯನ್, ಯು.ಎಸ್.ಎ ನಲಿ ಉನ್ನತ ತರಬೇತಿ
Specialization: ಮಣ್ಣು ಮತ್ತು ನೀರು ಸಂರಕ್ಷಣೆ ಇಂಜಿನಿಯರಿಂಗ್, ಹೈಡ್ರಾಲಾಜಿಕಲ್ ಮಾಡೆಲಿಂಗ್, ಸೂಕ್ಷಮ ಜಲಾನಯನದಲ್ಲಿ SWAT ಮಾಡೆಲಿಂಗ್.
+91-9886927776
ಡಾ. ಮೂರುಕಣ್ಣಪ್ಪ
ಸಹಾಯಕ ಪ್ರಾಧ್ಯಾಪಕರು,
ಪಿಹೆಚ್.ಡಿ ಜಲ ಸಂಪನ್ಮೂಲ ಇಂಜಿನಿಯರಿಂಗ್, ಎಂ.ಎಸ್ಸಿ (ಕೃಷಿ) ಮಣ್ಣು ಮತ್ತು ನೀರು ಸಂರಕ್ಷಣೆ ಇಂಜಿನಿಯರಿಂಗ್
Specialization: ಮಣ್ಣು ಮತ್ತು ನೀರು ಸಂರಕ್ಷಣೆ ಇಂಜಿನಿಯರಿಂಗ್, ಜಲಾನಯನ ನಿರ್ವಹಣೆ, ಸಂಪನ್ಮೂಲಗಳ ಗುಣಲಕ್ಷಣ
+91-9036943217
ಸಂಸ್ಕರಣೆ ಮತ್ತು ಆಹಾರ ಇಂಜಿನಿಯರಿಂಗ್ ವಿಭಾಗ

ಡಾ. ಸಿ.ಟಿ. ರಾಮಚಂದ್ರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಪಿಹೆಚ್.ಡಿ. (ಕೃಷಿ ಮತ್ತು ಆಹಾರ ಇಂಜಿನಿಯರಿಂಗ್), ಐಐಟಿ ಖರಗಪುರ್
ಎಂ.ಟೆಕ್ (ಕೃಷಿ ಮತ್ತು ಆಹಾರ ಇಂಜಿನಿಯರಿಂಗ್) ಸಿ.ಸಿ.ಎಸ್.ಹೆಚ್.ಎ.ಯು, ಹಿಸ್ಸಾರ್, ಹರಿಯಾಣ
ಪೋಸ್ಟ್ಡಾಕ್ಟೋರಲ್ ಸಂಶೋಧನೆ at Centre for Advanced Food Technology, Rutgers, New Brunswick, USA
Specialization: ಸಂಸ್ಕರಣೆ ಮತ್ತು ಆಹಾರ ಇಂಜಿನಿಯರಿಂಗ್, ಕೋಯ್ಲಿನೋತ್ತರ ಸಂಸ್ಕರಣೆ ಇಂಜಿನಿಯರಿಂಗ್ ಮತು ತತಂತ್ರಜ್ಞಾನ, ಆಹಾರ ಸಂಸ್ಕರಣೆ ಕಾರ್ಯಾಚರಣೆಯಲ್ಲಿ ಮಾಡೆಲಿಂಗ್, ಸಿಮುಲೇಶನ್ಮತ್ತು ವಿಶ್ಲೇಷಣೆ
+91-9449627325
ಡಾ. ಜಿ.ವಿ. ಮೋಹಿತ್‌ಕುಮಾರ
ಪ್ರಾಧ್ಯಾಪಕರು
ಪಿಹೆಚ್.ಡಿ. ಸಂಸ್ಕರಣೆ ಮತ್ತು ಆಹಾರತಂತ್ರಜ್ಞಾನ
Specialization: ಸಂಸ್ಕರಣೆ ಮತ್ತು ಆಹಾರತಂತ್ರಜ್ಞಾನ, ನವೀಕರಿಸ ಬಹುದಾದ ಶಕ್ತಿ, ಕೃಷಿ ಯಂತ್ರೋಪಕರಣ ಮತ್ತು ಶಕ್ತಿ ಇಂಜಿನಿಯರಿಂಗ್
gvmohith.471@gmail.com,
mohitkumargv@uasbangalore.edu.in
+91 9448886419
ಡಾ. ವೀರೇಶ್‌ ಕುಮಾರ್‌ ಗೌಡ
ಸಹಾಯಕ ಪ್ರಾಧ್ಯಾಪಕರು
ಪಿಹೆಚ್.ಡಿ. (ಕೃಷಿ ಇಂಜಿನಿಯರಿಂಗ್),
Specialization: ತ್ಯಾಜ್ಯದಿಂದ ಶಕ್ತಿ, ಜೈವಿಕಇಂಧನ, ಜೈವಿಕತ್ಯಾಜ್ಯ ನಿರ್ವಹಣೆ, ಕೋಯ್ಲಿನೋತ್ತರ ಸಂಸ್ಕರಣೆ ಇಂಜಿನಿಯರಿಂಗ್
+91-9341 447067
ಡಾ. ದ್ರೋಣಾಚಾರಿ ಮಾನ್ವಿ
ಸಹಾಯಕ ಪ್ರಾಧ್ಯಾಪಕರು,
ಪಿಹೆಚ್.ಡಿ. (ಆಹಾರ ಸಂಸ್ಕರಣೆ ಇಂಜಿನಿಯರಿಂಗ್)
ಎಂ.ಟೆಕ್ (ಕೋಯ್ಲಿನೋತ್ತರ ಸಂಸ್ಕರಣೆ ಮತ್ತು ಆಹಾರ ಇಂಜಿನಿಯರಿಂಗ್)
Specialization: ಆಹಾರಸಂಸ್ಕರಣೆ ಮತ್ತು ಸಂಗ್ರಹಣೆ, ಆಹಾರ ಅನ್ವಯಿಕದಲ್ಲಿ ಮೈಕ್ರೋವೇವ್ ಶಕ್ತಿ, ಗಣಿತಶಾಸ್ತ್ರದಲ್ಲಿ ಮಾಡೆಲಿಂಗ್, ಕಡಿಮೆ ವೆಚ್ಚದ ಯಂತ್ರೋಪಕರಣಗಳ ಅಭಿವೃದ್ಧಿ ಹಾಗೂ ರೇಷ್ಮೆ ಕೃಷಿಯಲ್ಲಿ ಯಾಂತ್ರೀಕರಣ
+91-9901499071
ಇಂ. ಕೃಷ್ಣಮ್ಮ ಪಿ.ಎನ್
ಸಹಾಯಕ ಪ್ರಾಧ್ಯಾಪಕರು,
ಎಂ.ಟೆಕ್ (ಕೋಯ್ಲಿನೋತ್ತರ ಸಂಸ್ಕರಣೆ ಮತ್ತು ಆಹಾರ ಇಂಜಿನಿಯರಿಂಗ್
Specialization: ಸಂಸ್ಕರಣೆ ಮತ್ತು ಆಹಾರತಂತ್ರಜ್ಞಾನ
+91-9060849870
ಕೃಷಿ ಯಂತ್ರೋಪಕರಣ ಮತ್ತು ಶಕ್ತಿ ಇಂಜಿನಿಯರಿಂಗ್ ವಿಭಾಗ

ಡಾ. ಜಯಶ್ರೀ ಜಿ.ಸಿ
ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ,
ಪಿಹೆಚ್.ಡಿ. (ಕೃಷಿ ಇಂಜಿನಿಯರಿಂಗ್), (ಕೃಷಿ ಯಂತ್ರೋಪಕರಣ ಮತ್ತು ಶಕ್ತಿ), ಟಿ.ಎನ್.ಎ.ಯು, ಕೋಯಮತ್ತೂರು
ಎಂ.ಟೆಕ್ (ಕೃಷಿ ಇಂಜಿನಿಯರಿಂಗ್) ಕೃಷಿ ಯಂತ್ರೋಪಕರಣ ಮತ್ತು ಶಕ್ತಿ), ಟಿ.ಎನ್.ಎ.ಯು, ಕೋಯಮತ್ತೂರು
Specialization: ಕೃಷಿ ಯಂತ್ರೋಪಕರಣ ಮತ್ತು ಶಕ್ತಿ ಇಂಜಿನಿಯರಿಂಗ್.
+91- 9164905746
ಡಾ.ಬಿ.ಎ. ಆನಂದ್
ಸಹಾಯಕ ಪ್ರಾಧ್ಯಾಪಕರು,,
ಪಿಹೆಚ್.ಡಿ. (ಎಲೆಕ್ಟಿಕಲ್ ಇಂಜಿನಿಯರಿಂಗ್)
Specialization : ನವೀಕರಿಸಬಹುದಾದ ಶಕ್ತಿ ಮೂಲಗಳು, ಶಕ್ತಿ ಇಂಜಿನಿಯರಿಂಗ್, ಸೌರ ಸಕ್ತಿ, ನಿಖರ ಇಂಜಿನಿಯರಿಂಗ್
+91-9480306217
ಶ್ರೀ. ಪ್ರಸನ್ನಕುಮಾರ್
ಸಹಾಯಕ ಪ್ರಾಧ್ಯಾಪಕರು
ಎಂ.ಎಸ್ಸಿ (ಕೃಷಿ), ಬಿ.ಇ. ಮೆಕ್ಯಾನಿಕಲ್
ಕೃಷಿ ಯಂತ್ರೋಪಕರಣ ಮತ್ತು ಶಕ್ತಿ ಇಂಜಿನಿಯರಿಂಗ್,
ಕೋಯ್ಲಿನೋತ್ತರ ಸಂಸ್ಕರಣೆ ಮತ್ತು ಆಹಾರ ಇಂಜಿನಿಯರಿಂಗ್
+91-99029 09656
ಡಾ. ಅರವಿಂದ ಯಾದವ್ ಕೆ
ಸಹಾಯಕ ಪ್ರಾಧ್ಯಾಕರು,
ಪಿಹೆಚ್.ಡಿ. ಕೃಷಿ ಯಂತ್ರೋಪಕರಣ ಮತ್ತು ಶಕ್ತಿ ಇಂಜಿನಿಯರಿಂಗ್
Specialization: ಕೃಷಿ ಯಂತ್ರೋಪಕರಣ ಮತ್ತು ಶಕ್ತಿ ಇಂಜಿನಿಯರಿಂಗ್
+91-9079986050
College of Agricultural Engineering
Laboratories
Soil and Water Engineering Laboratory
Processing and Food Engineering Laboratory
Engineering Workshop
Computer Laboratory
Conduction of Exams
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
    • ಸೈಟ್ ಅಂಕಿಅಂಶಗಳು