ಕೃಷಿ ಮಹಾವಿದ್ಯಾಲಯ, ಹಾಸನ

ಕೃಷಿ ಮಹಾವಿದ್ಯಾಲಯವು, ಹಾಸನದಿಂದ ಬೆಂಗಳೂರಿನ ಕಡೆಗೆ ರಾಷ್ಟ್ರೀಯ ಹೆದ್ದಾರಿ-48 (ಬೆಂಗಳೂರು-ಮಂಗಳೂರು) ರಲ್ಲಿ, 21 ಕಿ.ಮೀ. ದೂರದಲ್ಲಿ ಕಾರೆಕೆರೆ ಬಳಿ ಇದೆ. ಹಾಸನ ರಸ್ತೆ ಹಾಗೂ ರೈಲು ಸೌಕರ್ಯಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ಕೃಷಿ ಶಿಕ್ಷಣದ ಪ್ರಾಮುಖ್ಯತೆಯನ್ನು ಗುರುತಿಸಿ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು, ಕೃಷಿ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಹಾಸನವನ್ನು ಸೂಕ್ತ ಸ್ಥಳವೆಂದು ಆಯ್ಕೆ ಮಾಡಲಾಯಿತು. ವಿವಿಧ ಬೆಳೆಗಳು ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅನುಕೂಲಕರವಾದ ಕೃಷಿ-ಹವಾಮಾನ ಹಾಸನದಲ್ಲಿದೆ. ಗ್ರಾಮೀಣ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಲಕಾಲಕ್ಕೆ ಉತ್ತಮ ತರಬೇತಿ ಪಡೆದ ಮಾನವ ಸಂಪನ್ಮೂಲ, ಬೀಜಗಳು, ಗುಣಮಟ್ಟದ ಸಾಮಗ್ರಿಗಳು ಮತ್ತು ತಂತ್ರಜ್ಞಾನದ ಮೂಲಕ ಮಹಾವಿದ್ಯಾಲಯ ರಾಜ್ಯದ ಮತ್ತು ಹಾಸನದ ರೈತ ಸಮುದಾಯಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ.

ಸಂಸ್ಥೆಯ ಹುಟ್ಟು:

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರುನ್ನು ಕರ್ನಾಟಕ ಸರ್ಕಾರವು 1963 ರಲ್ಲಿ ಸ್ಥಾಪಿಸಿತು. ಸಮಕಾಲೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಬೆಳೆಗಳು ಮತ್ತು ಬೆಳೆ ಉತ್ಪಾದನೆಯನ್ನು ಸುಧಾರಿಸುವ ಪ್ರಯತ್ನದಲ್ಲಿ ರೈತ ಸಮುದಾಯಕ್ಕೆ ಸೇವೆ ಸಲ್ಲಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ತನ್ಮೂಲಕ ಆಹಾರ ಉತ್ಪಾದನೆಯಲ್ಲಿ ಸಮರ್ಪಕತೆ ಮತ್ತು ಆ ಮೂಲಕ ಆಹಾರ ಭದ್ರತೆಯನ್ನು ಕಾಣಲಾಗಿದೆ.

ದೇಶದಲ್ಲಿ ಕೃಷಿ ಶಿಕ್ಷಣವನ್ನು ಗ್ರಾಮೀಣೀಕರಣಗೊಳಿಸುವ ಸರ್ಕಾರದ ನೀತಿಯ ಭಾಗವಾಗಿ, ಹಾಸನ ಜಿಲ್ಲೆಗೆ 1996 ರಲ್ಲಿ ಹೊಸ ಕೃಷಿ ಮಹಾವಿದ್ಯಾಲಯವನ್ನು ಪ್ರಾರಂಭಿಸಲಾಯಿತು. ಹಾಸನದಲ್ಲಿ ಅಂದಿನ ಸಮಯಕ್ಕೆ ಮೂಲಭೂತ ಸೌಕರ್ಯಗಳು ಲಭ್ಯವಿಲ್ಲದ ಕಾರಣ ಆರಂಭದಲ್ಲಿ ತರಗತಿಗಳನ್ನು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಸಲಾಯಿತು. ತರುವಾಯ ಹಾಸನದ ಕಾರೆಕೆರೆಯಲ್ಲಿ ನೂತನ ಆವರಣವನ್ನು 2006 ರಲ್ಲಿ ಸ್ಥಾಪಿಸಲಾಯಿತು. ಈ ಆವರಣವು 184.25 ಎಕರೆ ಭೂಮಿಯನ್ನು ಹೊಂದಿದೆ.

2007 ರಲ್ಲಿ ಕೃಷಿ ಜೈವಿಕ ತಂತ್ರಜ್ಞಾನದಲ್ಲಿ ಪದವಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು, ಕೀಟ, ರೋಗ ಮತ್ತು ಒತ್ತಡ ನಿರ್ವಹಣೆಯಲ್ಲಿ ಸುಸ್ಥಿರ ಕೃಷಿ ಪದ್ಧತಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಬೆಳೆಯ ಇಳುವರಿಯನ್ನು ಹೆಚ್ಚಿಸುವಲ್ಲಿ ಸಮಗ್ರ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ಜೈವಿಕ ತಂತ್ರಜ್ಞಾನದ ಅಳವಡಿಕೆಯು ಅತ್ಯಂತ ಮಹತ್ವದ್ದಾಗಿದೆ. ಪದವಿ ಕಾರ್ಯಕ್ರಮವು ಬಲವಾದ ಶೈಕ್ಷಣಿಕ ಅಡಿಪಾಯದೊಂದಿಗೆ ತರಬೇತಿ ಪಡೆದ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸುವ ಪ್ರಮುಖ ಉದ್ದೇಶದೊಂದಿಗೆ-ತಂತ್ರಜ್ಞಾನ ಅಳವಡಿಕೆಯನ್ನು ಸಾಧಿಸಲು ಶ್ರಮಿಸುತ್ತದೆ.

ವೇಗವಾಗಿ ಬೆಳೆಯುತ್ತಿರುವ ಆಹಾರ ಸಂಸ್ಕರಣಾ ಉದ್ಯಮಕ್ಕೆ ಉತ್ತಮ ಅರ್ಹತೆ ಮತ್ತು ತರಬೇತಿ ಪಡೆದ ಮಾನವಶಕ್ತಿಯ ಅವಶ್ಯಕತೆಗಳನ್ನು ಪೂರೈಸಲು, ಬಿ.ಟೆಕ್. (ಆಹಾರ ವಿಜ್ಞಾನ) ಪದವಿ ಕಾರ್ಯಕ್ರಮವನ್ನು 2007 ರಲ್ಲಿ ಪ್ರಾರಂಭಿಸಲಾಯಿತು. ಆಹಾರ ಮತ್ತು ಪೌಷ್ಟಿಕ ವಿಜ್ಞಾನದ ವಿಶೇಷ ಕ್ಷೇತ್ರಗಳಲ್ಲಿ ವಿವಿಧ ಕೋರ್ಸ್ಗಳು, ಆಹಾರ ಸಂಸ್ಕರಣಾ ತಂತ್ರಜ್ಞಾನ, ಆಹಾರ ಮತ್ತು ಕೈಗಾರಿಕಾ ಮೈಕ್ರೋಬಯಾಲಜಿ, ಆಹಾರ ಎಂಜಿನಿಯರಿಂಗ್ ಮತ್ತು ಆಹಾರ ವ್ಯಾಪಾರ ಮತ್ತು ವ್ಯವಹಾರ ನಿರ್ವಹಣೆ ವಿವಿಧ ಕೋರ್ಸುಗಳನ್ನು ನೀಡಲಾಗುತ್ತದೆ. ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಜ್ಞಾನಕ್ಕಾಗಿ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
    • ಸೈಟ್ ಅಂಕಿಅಂಶಗಳು