ಕೃಷಿ ವಿಸ್ತರಣಾ ವಿಭಾಗ

farewell 2024

ಅನುಶ್ರಿತಿ 2024 | ರಾವೇ / ವಿಭಾಗದ ಜಾಲತಾಣ |


ಕೃಷಿ ವಿಸ್ತರಣಾ ವಿಭಾಗ

ಕೃಷಿ ವಿಸ್ತರಣಾ ವಿಭಾಗವು ೧೯೬೦-೬೧ರಲ್ಲಿ ಅಂತಿಮ ವರ್ಷದ ಬಿ.ಎಸ್ಸಿ. (ಕೃಷಿ) ಪದವಿ ವಿದ್ಯಾರ್ಥಿಗಳಿಗೆ ಕಡ್ಡಾಯ ಪಠ್ಯಕ್ರಮವಾಗಿ ಕೃಷಿ ವಿಸ್ತರಣಾ ವಿಷಯವನ್ನು ಸೇರಿಸುವ ಮೂಲಕ ಪ್ರಾರಂಭವಾಯಿತು.ಡಾ.ಕೆ.ಎ. ಜಾಲಿಹಾಳ್ರವರು ಕೃಷಿ ವಿಸ್ತರಣಾ ವಿಭಾಗದ ಪ್ರಥಮ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುತ್ತಾರೆ. ಕೃಷಿ ವಿಸ್ತರಣಾ ವಿಭಾಗವು ಅತ್ಯಂತಕಿರಿಯ ವಿಭಾಗವಾಗಿದ್ದು, ೧೯೬೬-೬೭ನೇ ಸಾಲಿನಲ್ಲಿ ಸ್ನಾತಕೋತ್ತರ ಬೋಧನೆಯನ್ನು ಪ್ರಾರಂಭಿಸಲಾಯಿತು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ೧೯೯೫-೯೬ ಸಾಲಿನಲ್ಲಿ “ಗ್ರಾಮೀಣ ಕೃಷಿ ಕಾರ್ಯಾನುಭವಕಾರ್ಯಕ್ರಮ” ಎಂಬ ಪ್ರಾಯೋಗಿಕ ಕಲಿಕಾ ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯದ ಎಲ್ಲಾ ಸ್ನಾತಕ ಪದವಿಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರಿಚಯಿಸಿತು.ಈ ಕಾರ್ಯಕ್ರಮವು ಒಂದು ಸೆ ಮಿಸ್ಟರ್ನ ಅವಧಿಯದಾಗಿದ್ದು ,ಒಟ್ಟು ೨೦ ಕ್ರೆಡಿಟ್ಗಳನ್ನ ಒಳಗೊಂಡಿತ್ತು.ಗ್ರಾಮೀಣ ಮಟ್ಟದಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ವಿಶ್ವವಿದ್ಯಾನಿಲಯದ ಎಲ್ಲಾ ವಿಭಾಗಗಳು ಪಾಲ್ಗೊಳ್ಳುವುದು ಈ ಕಾರ್ಯಕ್ರಮದ ವಿಶೇಷತೆಯಾಗಿತ್ತು.
ನಿವೃತ್ತ ಕುಲಪತಿಗಳಾದ ಡಾ.ಕೆ.ನಾರಾಯಣಗೌಡ ರವರು ಕಾರ್ಯಕ್ರಮದ ಪ್ರಥಮ ಸಂಯೋಜಕರಾಗಿ ಕೆಲಸ ನಿರ್ವಹಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದರು.ಕೃಷಿ ವಿಸ್ತರಣಾ ವಿಭಾಗವು“ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ” ಅನುಷ್ಠಾನಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿರುತ್ತದೆ.

ವಿಶ್ವವಿದ್ಯಾನಿಲಯವು ೨೦೧೨-೧೩ನೇ  ಶೈಕ್ಷಣಿಕ ವರ್ಷದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮವನ್ನು ೮ನೇ ಸೆಮಿಸ್ಟರ್ ಬದಲಾಗಿ ೭ನೇ ಸೆಮಿಸ್ಟರ್ನಲ್ಲಿ ಪುನರ್ರಚಿಸಲಾಯಿತು. ಕಾರ್ಯಕ್ರಮದ ಪುನರ್ರಚನೆಯ ಉದ್ದೇಶವೆಂದರೆ: ವಿದ್ಯಾರ್ಥಿಗಳ ಗ್ರಾಮ ವಾಸ್ತವ್ಯವು ಬೆಳೆ ಋತುವಿಗೆ ಹೊಂದಿಕೆ ಮಾಡುವುದು ಮತ್ತು ವಿದ್ಯಾರ್ಥಿಗಳನ್ನು ರೈತ ಸಂಪರ್ಕಕೇದ್ರಕ್ಕೆ ನಿಯೋಜಿಸುವುದು ಹಾಗೂ ವಿದ್ಯಾರ್ಥಿಗಳ ಗ್ರಾಮ ವಾಸ್ತವ್ಯವನ್ನು ೪ ವಾರಗಳಿಂದ ೧೨ ವಾರಗಳಿಗೆ ವಿಸ್ತರಿಸಿದ್ದರಿಂದ, ವಿದ್ಯಾರ್ಥಿಗಳು ರೈತರೊಡನೆ ಹೊಂದಿಕೊಂಡು ಭೂ ಆಧಾರಿತ ಉಧ್ಯಮಗಳ ನೈಜ ಹಾಗೂ ಪ್ರಾಯೋಗಿಕ ಅನುಭವವನ್ನು ಪಡೆಯಲು ಅವಕಾಶ ಕಲ್ಪಿಸುವುದು ಮತ್ತು ವಿವಿಧ ವಿಸ್ತರಣಾ ವಿಧಾನಗಳ ಮೂಲಕ ರೈತರಿಗೆ ತಂತ್ರಜ್ಞಾನಗಳನ್ನು ಪರಿಚಯಿಸುವುದು. ವಿಶ್ವವಿದ್ಯಾನಿಲಯದ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕೃಷಿ ಅಭಿವೃದ್ಧಿಯಲ್ಲಿ ತೊಡಗಿರುವ ವಿವಿಧ ಇಲಾಖೆಗಳ ಸಂಪರ್ಕವನ್ನ ಸಾಧಿಸಲು ಅನುವು ಮಾಡಿಕೊಡುತ್ತದೆ.ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಿಚಯಿಸಿದ ತಂತ್ರಜ್ಞಾನಗಳ ಕಾರ್ಯಕ್ಷಮತೆಯನ್ನು ಶಿಕ್ಷಕರು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿರುತ್ತದೆ. ಈ ಕಾರ್ಯಕ್ರಮವು ರೈತರಿಗೆ ಸಮಯಕ್ಕೆ ಅನುಗುಣವಾಗಿ ತಾಂತ್ರಿಕ ಮಾಹಿತಿ ತಲುಪಿಸುವುದಲ್ಲದೆ, ರೈತರಿಂದ ತಂತ್ರಜ್ಞಾನ ಅಳವಡಿಕೆಗೆ ಸಹಕಾರಿಯಾಗಿದೆ ಮತ್ತು ಕೃಷಿಕರ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಉಪಕಾರಿಯಾಗಿದೆ. ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ಒಂದು ತಿಂಗಳಿಗೆ ರೂ.೧೫೦೦/-ರ ಮೂರು ತಿಂಗಳುಗಳ ಕಾಲ ಗೌರವಧನವನ್ನು ನೀಡುವುದಲ್ಲದೆ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕರಿಸುತ್ತಾ ಬಂದಿರುತ್ತದೆ.

ವಿಸ್ತರಣಾ ವಿಭಾಗವು೫ನೇ ಡೀನ್ ಸಮಿತಿಯ ಶಿಫಾರಸ್ಸಿನಂತೆ ೨೦೧೦-೧೧ ಶೈಕ್ಷಣಿಕ ವರ್ಷದಿಂದ ಕೃಷಿ “ಪತ್ರಿಕೋದ್ಯಮ ಮತ್ತು ಮಲ್ಟಿಮೀಡಿಯಾ ಪ್ರೊಡಕ್ಷನ್” ಎಂಬ ಅನುಭವಾತ್ಮಕ ಕಲಿಕೆ ವಿಷಯದಲ್ಲಿ ಬೋಧನೆಯನ್ನು ಪ್ರಾರಂಬಿಸಿತು. ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಬಳಸಿ ಸಾಕ್ಷಯ ಚಿತ್ರಗಳನ್ನು ನಿರ್ಮಿಸಲುಕೋರ್ಸ್ನಲ್ಲಿ ಅವಕಾಶ ಮಾಡಿಕೊಡಲಾಯಿತು. ಅದರಂತೆ ವಿದ್ಯಾರ್ಥಿಗಳು ಕೃಷಿಗೆ ಸಂಬಂಧಪಟ್ಟ ಹಲವು ಸಾಕ್ಷಯ ಚಿತ್ರಗಳನ್ನು ನಿರ್ಮಿಸಿರುತ್ತಾರೆ.

ಕಳೆದ ಆರು ದಶಕಗಳಲ್ಲಿ ಕೃಷಿ ವಿಸ್ತರಣಾ ವಿಭಾಗದಲ್ಲಿ ೫೪೬ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ೧೫೭ ಪಿಹೆಚ್.ಡಿ. ವಿದ್ಯಾರ್ಥಿಗಳು ಪದವಿ ಪಡೆದಿರುತ್ತಾರೆ. ವಿಭಾಗದ ವಿದ್ಯಾರ್ಥಿಗಳು ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.ಕೃಷಿ ವಿಸ್ತರಣಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದವಿದೇಶಿ ವಿದ್ಯಾರ್ಥಿಗಳು ಇರಾನ್, ಆಫ್ರಿಕಾ ಮತ್ತು ಅಫ್ಘಾನಿಸ್ಥಾನ ದೇಶಗಳಲ್ಲಿ ವೃತ್ತಿಪರ ವಿಸ್ತರಣಾ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗ್ರಾಮೀಣ ಅಭಿವೃದ್ಧಿಯಲ್ಲಿ ಕೃಷಿ ವಿಸ್ತರಣೆಯ ಪ್ರಾಮುಖ್ಯತೆಯನ್ನು ಅರಿತು ಇಫ್ಕೋ ಸಂಸ್ಥೆಯು“ಇಫ್ಕೋ ಪೀಠ”ವನ್ನು ೧೯೮೧ರಲ್ಲಿ ಕೃಷಿ ವಿಸ್ತರಣಾ ವಿಭಾಗÀದಲ್ಲಿ ಸ್ಥಾಪಿಸಿರುತ್ತದೆ. ವಿಭಾಗದ ಅಧ್ಯಾಪಕರು ಆಧುನಿಕ ಮಾಹಿತಿ ತಂತ್ರಜ್ಞಾನ ವಿಧಾನಗಳನ್ನು ಬೋಧನೆಯಲ್ಲಿ ಅಳವಡಿಸಿಕೊಂಡಿರುತ್ತಾರೆ ಇದರಿAದ ಶಿಕ್ಷಕರ ಕಾರ್ಯಕ್ಷಮತೆ ಹೆಚ್ಚಿರುತ್ತದೆ. ವಿಸ್ತರಣಾ ವಿಭಾಗವು ವಿಶ್ವವಿದ್ಯಾನಿಲಯದ ದೊಡ್ಡ ವಿಭಾಗವಾಗಿದ್ದು, ಸೋಷಿಯಾಲಜಿ, ಇಂಗ್ಲೀಷ್ ಮತ್ತು ಸೈಕಾಲಜಿ ವಿಭಾಗಗಳು ಒಳಗೊಂಡಿರುತ್ತದೆ.

ವಿಭಾಗದ ವೃತ್ತಿಪರ ವಿಸ್ತರಣಾ ತಜ್ಞರಾದ ಡಾ.ನಾರಾಯಣಗೌಡ, ಡಾ.ಎಂ.ಎಸ್. ನಟರಾಜುರವರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ ಹಾಗೂ ಡಾ.ಎಸ್.ವಿ. ಸುರೇಶರವರು ಕುಲಪತಿಗಳಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುತ್ತಾರೆ,ಇದು ವಿಭಾಗಕ್ಕೆ ಹೆಮ್ಮೆಯ ವಿಷಯವಾಗಿರುತ್ತದೆ.

ವಿಭಾಗದ ಕಾರ್ಯಕ್ರಮಗಳು

ಶಿಕ್ಷಣ

ಕೃಷಿ ವಿಸ್ತರಣಾ ವಿಭಾಗವು ಬಿ.ಎಸ್ಸಿ. (ಆನರ್ಸ್) ಕೃಷಿ, ಬಿ.ಎಸ್ಸಿ. (ಆನರ್ಸ್) ಕೃಷಿ ಮಾರಾಟ ಮತ್ತು ಸಹಕಾರ ಹಾಗೂ ಬಿ.ಟೆಕ್. (ಕೃಷಿ ಇಂಜಿನಿಯರಿಗ್) ಸ್ನಾತಕ ವಿದ್ಯಾರ್ಥಿಗಳಿಗೆ ವಿಸ್ತರಣಾ ವಿಷಯದಲ್ಲಿ ಬೋಧನೆ ಮತ್ತು ಸ್ನಾತಕೋತ್ತರ ಹಾಗೂ ಪಿ,ಹೆಚ್.ಡಿ. ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ ತೊಡಗಿಸಿಕೊಂಡಿದೆ.

ತರಬೇತಿ

ಕೃಷಿ ವಿಸ್ತರಣಾ ವಿಭಾಗದ ಅಧ್ಯಾಪಕರು ಸರ್ಕಾರದ ಅಭಿವೃದ್ಧಿ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಹಾಗೂ ಇತರೆ ವೃತ್ತಿಪರರಿಗೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ವಿಭಾಗದ ಆಯ್ದತರಬೇತಿ ಕಾರ್ಯಕ್ರಮಗಳು ಈ ಕೆಳಕಂಡತಿರುತ್ತದೆ.

  • ವಿಸ್ತರಣಾ ವಿಧಾನಗಳ ಮತ್ತು ಸಂವಹನ ತಂತ್ರಗಳು.
  • ಕೃಷಿ ವಿಸ್ತರಣೆಗಾಗಿ ಮಾಹಿತಿ ನೆರವು.
  • ವಿಸ್ತರಣಾ ಶಿಕ್ಷಣ ವಿಧಾನಗಳು.
  • ತಂತ್ರಜ್ಞಾನ ವರ್ಗಾವಣೆಯಲ್ಲಿ ಸಮೂಹ ಮಾಧ್ಯಮಗಳ ಬಳಕೆ.

ವಿಚಾರ ಸಂಕೀರ್ಣ ಮತ್ತು ಬೇಸಿಗೆ ತರಬೇತಿ

ವೃತ್ತಿಪರರ ವಿಸ್ತರಣಾ ಕಾರ್ಯಕರ್ತರ ಅನುಕೂಲಕ್ಕಾಗಿ ವಿಭಾಗವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ:

  • ಕೃಷಿ ಅಭಿವೃದ್ಧಿ ಮತ್ತು ಅದರ ಕಾರ್ಯತಂತ್ರ ವಿಧಾನದ ಬಗ್ಗೆ ತರಬೇತಿ ಕಾರ್ಯಕ್ರಮ
  • ಸ್ವಯಂಉದ್ಯೋಗಕ್ಕಾಗಿ ಕೃಷಿ ಶಿಕ್ಷಣ ಮತ್ತು ಪ್ರಾದೇಶಿಕ ಅಭಿವೃದ್ಧಿಯಕುರಿತು ರಾಷ್ಟ್ರೀಯ ವಿಚಾರ ಸಂಕಿರಣ.
  • ಐಸಿಎಆರ್ (ಭಾರತೀಯ ಕೃಷಿ ಅನುಸಂಧಾನ ಪರಿಷತ್) ಪ್ರಾಯೋಜಿತಕಿರು ಕೋರ್ಸ್‍ಗಳು
ಸಂಶೋಧನೆ

ಕೃಷಿ ವಿಸ್ತರಣಾ ವಿಭಾಗವು ವಿದ್ಯಾರ್ಥಿಗಳ ಮೂಲಕ ಕೃಷಿ ವಿಸ್ತರಣೆಗೆ ಸಂಬಧಪಟ್ಟ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುತ್ತದೆ. ವಿಭಾಗದ ಅಧ್ಯಾಪಕರು ವಿಶ್ವವಿದ್ಯಾನಿಲಯ ಹಾಗೂ ಇತರೆ ಸಂಘ ಸಂಸ್ಥೆಗಳ ಪ್ರಾಯೋಜಿತ ಸಂಶೊಧನಾ ಯೋಜನೆಗಳಲ್ಲಿ ತೊಡಗಿಕೊಂಡಿರುತ್ತಾರೆ.

ವಿಭಾಗವು ಇದುವರೆಗೂ ಸುಮಾರು ೨೦ ಸಂಶೋಧನಾ ಯೋಜನೆಗಳನ್ನ ಪೂರ್ಣಗೊಳಿಸಿರುತ್ತದೆ. ಸುಮಾರು ೬ ಯೋಜನೆಗಳಿಗೆ ಅಂತರರಾಷ್ಟ್ರೀಯ ಸಂಸ್ಥೆಗಳಾದ ಯು.ಎಸ್.ಎ.ಐ.ಡಿ.,ಜಪಾನಿನ ಬ್ಯಾಂಕ್ ಆಫ್ ಇಂಟರ್ನ್ಯಾಷನಲ್  ಕರ್ಪೋರೇಷನ್,ರಾಕ್ಫೆಲ್ಲರ್ಮತ್ತು ಮೆಕ್ನೈಟ್ ಸಂಸ್ಥೆಗಳಿದ ಧನಸಹಾಯ ಪಡೆದಿರುತ್ತದೆ. ಉಳಿದ ಯೋಜನೆಗಳನ್ನು ವಿಶ್ವಬ್ಯಾಂಕ್,ಯು.ಎ.ಎಸ್.,ಎನ್.ಡಿ.ಡಿ.ಬಿ., ಸರ್ಕಾರೇತರ ಸಂಸ್ಥೆಗಳು, ವಾಣಿಜ್ಯ ಸಚಿವಾಲಯ, ಜೈವಿಕತಂತ್ರಜ್ಞಾನ ಇಲಾಖೆ,ತೆಂಗುಅಭಿವೃದ್ಧಿ ಮಂಡಳಿ, ಕಾಫಿ ಮಂಡಳಿಗಳ ಧನ ಸಹಾಯ ಪಡೆದು ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ.

 

ಸಂಶೋಧನಾ ವಿಷಯಗಳು

  • ಶಿಕ್ಷಣ ತಾಂತ್ರಿಕತೆಗಳು
  • ಗ್ರಾಮೀಣಾಭಿವೃದ್ಧಿ
  • ಸಮುದಾಯಅಭಿವೃದ್ಧಿ
  • ಎಣ್ಣೆಕಾಳು ಅಭಿವೃದ್ಧಿ
  • ಕೃಷಿ ಅರಣ್ಯ
  • ಕೃಷಿ ತಂತ್ರಜ್ಞಾನ ಅಳವಡಿಕೆ
  • ಪೌಷ್ಠಿಕತೆ
  • ರಾಷ್ಟೀಯ ಕೃಷಿ ನೀತಿ
  • ನವೀನ ತಂತ್ರಜ್ಞಾನಗಳು
  • ಮಾರುಕಟ್ಟೆ ಸೂಕ್ತತೆ
  • ಬಡ ಎಸ್ಸಿ/ಎಸ್ಟಿ ಮಹಿಳಾ ಸಂಸ್ಥೆಗಳ ಸ್ಥಾಪನೆ
  • ನೀರು ಬಳಕೆ ಸಂಘಗಳ ರಚನೆ
  • ಸಂಘ/ ಸಂಸ್ಥೆಗಳು ಕಾರ್ಯಕ್ಷಮತೆ ಸುಧಾರಣೆ

ಈ ಮೂಲಕ ವಿಭಾಗದ ಅಧ್ಯಾಪಕರು ವಿಸ್ತರಣಾ ವಿಜ್ಞಾನಕ್ಕೆ ಹೆಚ್ಚಿನ ಕೊಡುಗೆ ನೀಡಿರುತ್ತಾರೆ.

 

ವಿದ್ಯಾರ್ಥಿ ಸಂಶೋಧನೆಗಳು

  • ಕೃಷಿ ತಂತ್ರಜ್ಞಾನಗಳ ಸಂವಹನೆ ಮತ್ತು ಅಳವಡಿಕೆ
  • ಮಾನವ ಸಂಪನ್ಮೂಲ ಅಭಿವೃದ್ಧಿ
  • ಕೃಷಿ ಅಭಿವೃದ್ಧಿ, ಗ್ರಾಮೀಣಅಭಿವೃದ್ಧಿ ಮತ್ತು ಬಡತನ ನಿರ್ಮೂಲನಾ ಕಾರ್ಯಕ್ರಮಗಳ ಪರಿಣಾಮ
  • ಸಂವಹನೆ, ಪತ್ರಿಕೋಧ್ಯಮ ಹಾಗೂ ಸಮೂಹ ಮಾಧ್ಯಮ
  • ಕೃಷಿ ಉತ್ಪಾದನೆ ಮತ್ತು ಸುಸ್ಥಿರತೆ
  • ಯುವ ಮತ್ತು ಮಹಿಳಾ ಸಬಲೀಕರಣ
  • ಕೃಷಿ ಮಾರುಕಟ್ಟೆ ಮತ್ತು ಬೆಲೆಗಳ ಏರಿಳಿತ
  • ಕೃಷಿ ವಿಸ್ತರಣಾ ವ್ಯವಸ್ಥೆ
  • ಪರಿಸರ ಕಾಳಜಿ ಮತ್ತು ಹವಾಮಾನ ಬದಲಾವಣೆ
  • ಗ್ರಾಮೀಣಜೀವನೋಪಾಯ ಮತ್ತು ಸಮಗ್ರಅಭಿವೃದ್ಧಿ
  • ಸಮೂಹಿಕ ಭಾಗವಹಿಸುವಿಕೆ ವಿಸ್ತರಣಾ ವಿಧಾನಗಳು
  • ಸಾಮಾಜಿಕ ಬಂಡವಾಳ ಅಭಿವೃದ್ಧಿ
  • ಸರಕುಆಧಾರಿತ ಸಂಸ್ಥೆ / ರೈತ ಗುಂಪುಗಳುಿ
  • ನೈಸರ್ಗಿಕ ಸಂಪನ್ಮೂಲ ನಿರ್ವಹಣೆಿ
  • ವಿಸ್ತರಣಾ ಸಂಶೋಧನಾ ವಿಧಾನಗಳುಿ
  • ಹವಾಮಾನ ಚತುರ ಕೃಷಿ

ಸಿಬ್ಬಂದಿ

ಡಾ. ವೈ.ಎನ್. ಶಿವಲಿಂಗಯ್ಯ
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಎಂ.ಎಸ್ಸಿ.(ಕೃಷಿ), ಪಿಹೆಚ್.ಡಿ.
ಪರಿಣಿತಿ: ಯುವಕರ ಅಭಿವೃದ್ಧಿ ಗ್ರಾಮೀಣ ಅಭಿವೃದ್ಧಿ ಪರಿಣಾಮ ವಿಶ್ಲೇಷ
+91-9611457341
080 23330153, Extn. 367
ಡಾ. ಗಣೇಸಮೂರ್ತಿ, ಎಸ್
ಪ್ರಾಧ್ಯಾಪಕರು
ಪರಿಣಿತಿ : ಮಾಹಿತಿ ತಂತ್ರಜ್ಞಾನ ನಿರ್ವಹಣೆ ಮತ್ತು ಕೌಶಲ್ಯ ಅಭಿವೃದ್ಧಿ
+91-9731876687
080 23330153, Extn. 367
ಡಾ. ಸವಿತ, ಸಿ.ಎಂ.
ಸಹ ಪ್ರಾಧ್ಯಾಪಕರು
ಪರಿಣಿತಿ : ತರಬೇತಿ ನಿರ್ವಹಣೆ ಮತ್ತು ಸಾಮರ್ಥ್ಯಅಭಿವೃದ್ಧಿ
+91-9986635272
080 23330153, Extn. 367
ಡಾ. ಪಂಕಜ, ಹೆಚ್.ಕೆ.
ಸಹಾಯಕ ಪ್ರಾಧ್ಯಾಪಕರು
ಪರಿಣಿತಿ: ಸಂವಹನೆ ಮತ್ತು ವಿಸ್ತರಣಾ ವಿಧಾನಗಳು
+91-9449429217
ಡಾ. ಎನ್.ಮಂಜುಳಾ
ಪ್ರಾಧ್ಯಾಪಕರು
ಪರಿಣಿತಿ : ಶೈಕ್ಷಣಿಕ ತಂತ್ರಜ್ಞಾನ
+91-9900895829
080 23330153, Extn. 367
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
    • ಸೈಟ್ ಅಂಕಿಅಂಶಗಳು