ಡಾ. ವೈ.ಎನ್. ಶಿವಲಿಂಗಯ್ಯ
ವಿಸ್ತರಣಾ ನಿರ್ದೇಶಕರು
ವಿಸ್ತರಣಾ ನಿರ್ದೇಶನಾಲಯವು ಕರ್ನಾಟಕದ ೧೦ ದಕ್ಷಿಣ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಹಾಸನ, ತುಮಕೂರು, ಮಂಡ್ಯ, ಮೈಸೂರು ಮತ್ತು ಚಾಮರಾಜನಗರದಲ್ಲಿ ವಿಸ್ತರಣಾ ಸೇವೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದ್ದು, ತ್ವರಿತ ಕೃಷಿ ಬೆಳವಣಿಗೆಗಾಗಿ, ಸುಧಾರಿತ ಉತ್ತಮ ಮಾಹಿತಿ ಲಭ್ಯತೆ, ಜ್ಞಾನ ಸಂಪನ್ಮೂಲ ಅಭಿವೃದ್ಧಿ, ಫಲಕಾರಿಪ್ರತಿಕ್ರಿಯೆ ವ್ಯವಸ್ಥೆಗಾಗಿ ಕಾರ್ಯವಿಧಾನ, ಲಿಂಗ ಸಮಾನತೆ, ಸಣ್ಣ, ಅತಿ ಸಣ್ಣರೈತರ ಮತ್ತು ಪಾಲುದಾರರ ಸಬಲೀಕರಣಕ್ಕಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಕ್ರಿಯಗೊಳಿಸಿದ ಪರಿಣಾಮಕಾರಿ ವೆಚ್ಚದ ವಿಸ್ತರಣಾ ಸೇವೆಗಳನ್ನು ರೈತರ ಬಂಧವರಿಗೆ ತಲುಪಿಸಲು ನಿರ್ದೇಶನಾಲಯವು ಹೆಚ್ಚಿನ ಒತ್ತು ನೀಡಿದೆ. ಮುಂದುವರೆದು, ತಂತ್ರಜ್ಞಾನ ವರ್ಗಾವಣೆಯ ಗ್ರಾಮೀಣಅಭಿವೃದ್ಧಿ, ಜೈವಿಕತಂತ್ರಜ್ಞಾನದ ಲಭ್ಯತೆ, ಪರಿಸರಜಾಗೃತಿ ಆರೋಗ್ಯ, ಉದ್ಯೋಗ ಮತ್ತು ಸಂಬAಧಿತ ಸರ್ಕಾರಿ ಘಟಕಗಳನ್ನು ಒಳಗೊಂಡಿದೆ.
ವಿಸ್ತರಣಾ ಶಿಕ್ಷಣ ಕಾರ್ಯಕ್ರಮಗಳು ತ್ವರಿತ ಕೃಷಿ ಬೆಳವಣಿಗೆಗಾಗಿ ತಂತ್ರಜ್ಞಾನದ ಮೌಲ್ಯಮಾಪನ ಮತ್ತು ಪರಿಷ್ಕರಣೆಯನ್ನು ಹೊಂದಿದ್ದು ರೈತರಿಗೆ ಸಂಶೋಧನಾ ಫಲಿತಾಂಶಗಳ ಆಧಾರದ ಮೇಲೆ ತಂತ್ರಜ್ಞಾನದ ಅಳವಡಿಕೆಗೆ ಅನುಕೂಲವಾಗುತ್ತದೆ. ವಿಸ್ತರಣಾ ನಿರ್ದೇಶನಾಲಯವು ವಿವಿಧ ಪಾಲುದಾರರ ಅನುಕೂಲಕ್ಕಾಗಿ ಪ್ರಾತ್ಯಾಕ್ಷಿಕೆಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತದೆ. ವಿಸ್ತರಣೆಯನ್ನು ವಿಶ್ವವಿದ್ಯಾಲಯದ ವಿವಿಧ ಘಟಕಗಳು ಮತ್ತು ಕೇಂದ್ರ ಮತ್ತು ರಾಜ್ಯದಇತರ ಸೂಕ್ತ ಏಜೆನ್ಸಿಗಳೊಂದಿಗೆ ಸಂಯೋಜಿಸಬೇಕು. ವಿಶ್ವವಿದ್ಯಾಲಯವು ರಾಜ್ಯದಲ್ಲಿ ಕೃಷಿ ವಿಸ್ತರಣೆಯ ಮಾದರಿಗಳನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಮುಂದುವರೆದು, ನಿರ್ದೇಶನಾಲಯವು ವಿಶ್ವವಿದ್ಯಾನಿಲಯದ ವಿವಿಧ ಘಟಕಗಳು, ಕೇಂದ್ರ ಮತ್ತು ರಾಜ್ಯದ ಇತರ ಸೂಕ್ತ ಸಂಸ್ಥೆಗಳೊಂದಿಗೆ ಸಂಯೋಜಿಸುವುದರ ಜೊತೆಗೆ ರಾಜ್ಯದಲ್ಲಿ ಕೃಷಿ ವಿಸ್ತರಣೆಯ ಮಾದರಿಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.
ವಿಸ್ತರಣಾ ನಿರ್ದೇಶನಾಲಯದ ಮುಖ್ಯ ಉದ್ದೇಶಗಳು ಈ ಕೆಳಗಿನಂತಿವೆ.
- ರೈತರಿಗೆ ನೂತನ, ಲಾಭದಾಯಕ, ವಿಶ್ವಾಸಾರ್ಹ, ಸಾಮಾಜಿಕವಾಗಿ ಸ್ವೀಕಾರಾರ್ಹ, ಪರಿಸರ, ಸಮರ್ಥನೀಯ ಮತ್ತು ಸಮಯೋಚಿತ ಮಾಹಿತಿಯನ್ನು ಒದಗಿಸುವುದು.
- ನೂತನ ತಂತ್ರಜ್ಞಾನಗಳನ್ನು ಅಳವಡಿಕೆಯಲ್ಲಿ ರೈತರು ಎದುರಿಸುವ ಸಮಸ್ಯೆಗಳನ್ನು ಪರೀಕ್ಷಿಸಲು ಮತ್ತು ಅವಶ್ಯಕತೆ ಇದ್ದರೆ ತಂತ್ರಜ್ಞಾನಗಳನ್ನು ಮಾರ್ಪಡಿಸಲು/ ಸಮನ್ವಯ ಸಾಧಿಸುವುದರ ಕುರಿತು ಸಂಶೋಧನಾ ವ್ಯವಸ್ಥೆಗೆ ಪ್ರತಿಕ್ರಿಯೆಯನ್ನು ಒದಗಿಸುವುದು..
- ವಿಸ್ತರಣಾ ಸೇವೆಯಗುಣ ಮಟ್ಟ ಮತ್ತು ಪರಿಣಾಮಕಾರಿತ್ವವನ್ನು ಸುಧಾರಿಸುವ ಮಾರ್ಗಗಳು ಮತ್ತು ವಿಧಾನಗಳನ್ನು ಅಭಿವೃದ್ಧಿಪಡಿಸುವುದು..
ಮೇಲೆ ತಿಳಿಸಲಾದ ಉದ್ದೇಶಗಳನ್ನು ಸಾಧಿಸಲು, ವಿಸ್ತರಣಾ ನಿರ್ದೇಶನಾಲಯವು ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸುತ್ತದೆ.
- ಕ್ಷೇತ್ರ ವಿಸ್ತರಣಾಕಾರ್ಯಕರ್ತರಿಗೆ ಮತ್ತು ರೈತ ಸಮುದಾಯಕ್ಕೆ ಸಲಹಾ ಸೇವೆಗಳನ್ನು ನೀಡುವುದು
- ನೂತನ ಸಂಶೋಧನಾಫಲಿತಾಂಶಗಳ ಮೇಲೆ ಕ್ಷೇತ್ರ ಪ್ರಯೋಗಗಳನ್ನು ನಡೆಸುವುದು ಹಾಗೂ ಮಂಚೂಣಿಯ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳುವುದು.
- ನೂತನ ಕೃಷಿ ತಂತ್ರಜ್ಞಾನಗಳ ಕುರಿತು ವಿಸ್ತರಣಾ ವೃತ್ತಿಪರರಿಗೆ ಹಾಗೂ ರೈತರಿಗೆ ಸೂಕ್ತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
- ಕೃಷಿ ಸಂಶೋಧನೆ ಮತ್ತು ಭೋಧನೆಯ ಉತ್ತೇಜನ
೧. ಸಿಬ್ಬಂದಿ ತರಬೇತಿಘಟಕ, ಜಿ.ಕೆ.ವಿ.ಕೆ., ಬೆಂಗಳೂರು
೨. ರೈತ ತರಬೇತಿ ಸಂಸ್ಥೆ, ಜಿ.ಕೆ.ವಿ.ಕೆ., ಬೆಂಗಳೂರು
೩. ಕೃಷಿ ಮಾಹಿತಿಘಟಕ, ಜಿ.ಕೆ.ವಿ.ಕೆ., ಬೆಂಗಳೂರು
೪. ಕೃಷಿ ತಂತ್ರಜ್ಞಾನ ಮಾಹಿತಿಕೇಂದ್ರ, ಜಿ.ಕೆ.ವಿ.ಕೆ., ಬೆಂಗಳೂರು
೫. ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯ ವರ್ಧನಾ ಸಂಸ್ಥೆ, ಜಿ.ಕೆ.ವಿ.ಕೆ., ಬೆಂಗಳೂರು
೬. ರಾಷ್ಟ್ರೀಯ ಕೃಷಿ ವಿಸ್ತರಣಾ ಪ್ರಾಯೋಜನೆ– ಮಂಡ್ಯ ಮತ್ತು ಬೆಂಗಳೂರು
೭. ದೂರ ಶಿಕ್ಷಣ ಘಟಕ, ಜಿ.ಕೆ.ವಿ.ಕೆ., ಬೆಂಗಳೂರು
೮. ರಾಜ್ಯ ಕೃಷಿ ನಿರ್ವಹಣೆ ಮತ್ತು ವಿಸ್ತರಣಾ ತರಬೇತಿ ಸಂಸ್ಥೆ (ಸಮೇತಿ- ದಕ್ಷಿಣ)
೯. ಕೃಷಿ ವಿಜ್ಞಾನ ವಸ್ತು ಸಂಗ್ರಹಾಲಯ, ಜಿ.ಕೆ.ವಿ.ಕೆ., ಬೆಂಗಳೂರು
೧೦. ಕೃಷಿ ವಿಜ್ಞಾನ ಕೇಂದ್ರಗಳು (ಕೆ.ವಿ.ಕೆ)- ಹಾಸನ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು-೧, ಚಾಮರಾಜನಗರ ಮತ್ತು ಮಂಡ್ಯ
೧೧. ವಿಸ್ತರಣಾ ಶಿಕ್ಷಣ ಘಟಕಗಳು- ಮೈಸೂರು / ಕೋಲಾರ
ಹರಿವಿನ ನಕ್ಷೆ (ಫ್ಲೋಚಾರ್ಟ್)ಯು ವಿಶ್ವವಿದ್ಯಾಲಯ ಮಟ್ಟದಲ್ಲಿ ವಿಸ್ತರಣಾ ನಿರ್ದೇಶನಾಲಯದ ಸಾಂಸ್ಥಿಕ ರಚನೆಯನ್ನು ಒದಗಿಸುತ್ತದೆ.
ವಿಸ್ತರಣೆ ನಿರ್ದೇಶನಾಲಯದ ಸಿಬ್ಬಂದಿ
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
- ಸೈಟ್ ಅಂಕಿಅಂಶಗಳು