Title Image

ಗ್ರಂಥಾಲಯ ಬೆಂಗಳೂರು

University of Agricultural Sciences Bangalore, a premier institution of agricultural education and research in the country

ವಿಶ್ವವಿದ್ಯಾನಿಲಯ  ಗ್ರಂಥಾಲಯವು ಪ್ರಾಥಮಿಕ ಮಾಹಿತಿ ಸಂಪನ್ಮೂಲ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ವಿಶ್ವವಿದ್ಯಾನಿಲಯದಲ್ಲಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಿಗಾಗಿ ಮುದ್ರಿತ ಮತ್ತು ವಿದ್ಯುನ್ಮಾನ ಸಂಪನ್ಮೂಲಗಳ ಭಂಡರಾವಾಗಿದೆ. ವಿಶ್ವವಿದ್ಯಾನಿಲಯದಲ್ಲಿ ಬೋಧನೆ ಮಾಡುವಎಲ್ಲಾ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಹಾಗೂ ಶಿಫಾರಸ್ಸು ಮಾಡಲಾದ ಪಠ್ಯ ಪುಸ್ತಕಗಳು ಸಂಗ್ರಹಿಸಲಾಗಿದೆ. ಶಿಫಾರಸ್ಸು ಮಾಡಲಾದ ಓದುವ ಸಾಮಗ್ರಿಗಳ ಹೊರತಾಗಿ ವಿಶ್ವವಿದ್ಯಾನಿಲಯ ಗ್ರಂಥಾಲಯದಲ್ಲಿ ಸಂಶೋಧನಾ ಮೊನೊಗ್ರಾಫ್‌ಗಳು, ವರದಿಗಳು, ಬಹು ಸಂಪುಟಉಲ್ಲೇಖ ಕೃತಿಗಳು, ನಿಘಂಟುಗಳು, ವಿಶ್ವಕೋಶಗಳು, ಕೈಪಿಡಿಗಳು ಇತ್ಯಾದಿಗಳ ಸಂಗ್ರಹವನ್ನು ಹೊಂದಿದೆ. ವಿಶ್ವವಿದ್ಯಾನಿಲಯ ಗ್ರಂಥಾಲಯವು ಸೆರಾ (CeRA) ಒಕ್ಕೂಟದಲ್ಲಿ ಭಾಗವಹಿಸುವ ಮೂಲಕ ವಿದ್ಯುನ್ಮಾನ ನಿಯತಕಾಲಿಕೆಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಗ್ರಂಥಾಲಯವು ಹಲವಾರು ವಿದ್ಯುನ್ಮಾನ ನಿಯತಕಾಲಿಕೆಗಳನ್ನು ನೇರವಾಗಿ ಪ್ರಕಾಶಕರಿಂದ ಹಾಗೂ ಪ್ರತಿಷ್ಟಿತ ಚಂದಾದಾರಿಕೆ ಏಜೆನ್ಸಿಗಳ ಮೂಲಕ ಚಂದಾದಾರಿಕೆಯನ್ನು ಪಡೆಯುತ್ತಿದೆ. ಪುಸ್ತುತ ಬಳಕೆದಾರರು ಸುಮಾರು ೨ ಲಕ್ಷ ಸಂಪನ್ಮೂಲಗಳನ್ನು (ಕಪಾಟಿನಲ್ಲಿ ದಾಸ್ತಾನಿನಲ್ಲಿರುವ) ಮತ್ತು ಸಾವಿರಾರು ವಿದ್ಯುನ್ಮಾನ ಪುಸ್ತಕಗಳು, ನಿಯತಕಾಲಿಕೆಗಳನ್ನು ಸಂಪರ್ಕಿಸಬಹುದು. OCLC Worldcat (ವಿದ್ಯುನ್ಮಾನಗಣಕಯಂತ್ರ ಗ್ರಂಥಾಲಯಕೇಂದ್ರ), Indian Digital Ensemble of Agricultural Libraries (IDEAL) (ಭಾರತೀಯ ವಿದ್ಯುನ್ಮಾನ ಕೃಷಿ ಗ್ರಂಥಾಲಯಗಳ ಸಮೂಹ), National Digital Library (ರಾಷ್ಟ್ರೀಯ ವಿದ್ಯುನ್ಮಾನಗ್ರಂಥಾಲಯ) MJAS (ಮೈಸೂರು ಕೃಷಿ ವಿಜ್ಞಾನ ನಿಯತಕಾಲಿಕೆ), ಹೆಸರಾಂತ ವಿದ್ಯುನ್ಮಾನ ಪುಸ್ತಕಗಳ ಪ್ರಕಟಣೆಕಾರರಿಂದ ಇ-ಪುಸ್ತಕಗಳನ್ನು ಖರೀದಿಸಲಾಗಿದೆ. ಜೊತೆಗೆಯೋಜನಾ ಮತ್ತುಕುರುಕ್ಷೇತ್ರದಂತಹ ನಿಯತಕಾಲಿಕೆಗಳಿಗೆ ಅಂತರ್ಜಾಲ ತಾಣ ಮುಖೇನ ಪ್ರವೇಶವನ್ನುಒಗಿಸಲಾಗಿದೆ.

ವಿಶ್ವವಿದ್ಯಾನಿಲಯ ಗ್ರಂಥಾಲಯವು ಕೋಹಾ (Koha) ತಂತ್ರಾಂಶವನ್ನು ಅಳವಡಿಸಿಕೊಂಡು ಸ್ವಯಂಚಾಲಿತವಾಗಿದೆ. ಸಾರ್ವಜನಿಕ ಡೊಮೇನ್‌ನಲ್ಲಿರುವ ಅಂತರ್ಜಾಲ ಸಾರ್ವಜನಿಕ ಪ್ರವೇಶ ಪುಸ್ತಕಗಳ ಪಟ್ಟಿ (OPAC) ಮತ್ತು ಮೈಲಾಫ್ಟ್ (MyLoftSoftware) ತಂತ್ರಾಂಶವನ್ನು ಗ್ರಂಥಾಲಯವು ಹೊಂದಿರುವ ಸಂಪನ್ಮೂಲಗಳನ್ನು ಹುಡುಕಲು ಬಳಕೆದಾರರನ್ನು ಸಕ್ರಿಯಗೊಳಿಸುತ್ತದೆ. ಗ್ರಂಥಾಲಯವು ರೇಡಿಯೋ ತರಂಗಾಂತರ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸುತ್ತಿದೆ (RFID).  ಇದು ಸ್ವಯಂ ಸೇವೆ ಮತ್ತು ವರ್ಧಿತ ಭದ್ರತೆಗೆ ಸಹಾಯ ಮಾಡುವ ಅತ್ಯಾಧುನಿಕ ಸ್ವಯಂಗುರುತಿಸುವಿಕೆ ಯತಂತ್ರಾಂಶವಾಗಿದೆ. ಪುಸ್ತಕಗಳು, ಪ್ರಬಂಧಗಳು ಮತ್ತು ಪ್ರಬಂಧಗಳ ಸಿಡಿಗಳು ಮತ್ತು ಡಿವಿಡಿಗಳನ್ನು ಶೋಧ ಮಾಡಲು ಗ್ರಂಥಾಲಯದಲ್ಲಿ ಪ್ರತ್ಯೇಕ ವಿದ್ಯುನ್ಮಾನ ಸಂಪನ್ಮೂಲ ವಿಭಾಗವನ್ನು ಒದಗಿಸಲಾಗಿದೆ. ಈ ಹಂತಗಳು ಶೈಕ್ಷಣಿಕೆ ಸಮುದಾಯಕ್ಕೆ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡುವಲ್ಲಿ ಗ್ರಂಥಾಲಯದ ಕಾರ್ಯದಕ್ಷತೆಯನ್ನು ಹೆಚ್ಚಿಸುತ್ತವೆ ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಅಂತರ ಗ್ರಂಥಾಲಯ ಉಪಕ್ರಮಗಳಲ್ಲಿ ಭಾಗವಹಿಸಲು ಸಂಸ್ಥೆಯನ್ನು ಸಕ್ರಿಯಗೊಳಿಸುತ್ತದೆ.

ನಮ್ಮ ಗ್ರಂಥಾಲಯವು ದೃಷ್ಟಾಂತ ವಾಕ್ಯ (Citation Analysis) ವಿಶ್ಲೇಷಣೆಯಂತರ ವಿಸ್ತಾರವಾದ ಸಂಶೋಧನಾ ಬೆಂಬಲ ಸೇವೆಗಳನ್ನು ಒದಗಿಸುತ್ತದೆ. ಉಲ್ಲೇಖ ನಿರ್ವಹಣಾ ಪರಿಕರಗಳ ಬಳಕೆ, ಇತ್ಯಾದಿ, ಉದಯೋನ್ಮುಖ ಶೈಕ್ಷಣಿಕೆ ಮತ್ತು ಸಂಶೋಧನಾ ಬೆಂಬಲ ಸಾಧನಗಳನ್ನು ಗುರುತಿಸಲು ಮತ್ತು ಅಳವಡಿಸಿಕೊಳ್ಳಲು ಗ್ರಂಥಾಲಯವು ನಿರಂತರವಾಗಿ ಶ್ರಮಿಸುತ್ತಿದೆ ಮತ್ತು ಅದರದೃಷ್ಟಿ ಹಾಗೂ ಧ್ಯೇಯವನ್ನು ಸಾಧಿಸುವಲ್ಲಿ ಸಂಸ್ಥೆಗೆ ಸಹಾಯ ಮಾಡುತ್ತದೆ.

Library & Information Centre Website

ಗ್ರಂಥಾಲಯದ ಸಮಯಗಳು

ಸೋಮವಾರ ದಿಂದ ಶುಕ್ರವಾರ ಬೆಳಿಗ್ಗೆ 8.30 ರಿಂದ ಮಧ್ಯರಾತ್ರಿ 12.00 ರವರೆಗೆ
ಶನಿವಾರ ಬೆಳಿಗ್ಗೆ 8.30 ರಿಂದ ಸಂಜೆ 6.00 ರವರೆಗೆ
ಭಾನುವಾರ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00ರವರೆಗೆ

ಗ್ರಂಥಾಲಯವು ಸರ್ಕಾರದ ರಜೆದಿನಗಳಂದು ಮುಚ್ಚಿರುತ್ತದೆ

Programs Conducted
All Sections
Kannada Section:

The Library has separate section for literature in Kannada language (vernacular language). Wherein the UASB published Government of Karnataka, Kannada SahityaParishath published books & other Publishers have been kept for both in borrowing /reference sections for the benefit of the readers.

Research cubical– A Unique Seating Facility:

The University Main Library has 40 Research Cubicles each measuring 10×10 sq. ft. each equipped with a table chair fan with good lighting facility with lock & key. The PG students can avail this Research Cubicles Facility & execute their Thesis writing, analysis & reference work in the most congenial atmosphere without much disturbance from other students. This service is being extended to all the PG students on first com first serve basis.

Computer Laboratory:

A Computer Lab with free internet facility has been established. This lab has 60 computers with modern work station and Wi-Fi facility for 60 students at a time. The Student can browse & access the internet for referring e-Journals & also mail checking.

Video Library :

The Library has procured necessary automation equipments, furniture’s, and established the video library for the benefit of the students and faculties. The video library provides an opportunity for student/faculties to listen/attend lecture sessions of live streaming & also the recorded video will be uploaded to server which can viewed by students and staff

RFID Technology:

The RFID Technology (Radio frequency identification technology) has been adopted for stock verification, asset management and self Check-in& Check-out facility at main library.

The Collection of University Library is as follows:

Details of books and other periodicals in the university libraries as on 31st March, 2019

SL.No. Particulars GKVK Library CoA, Hassan CoA, Mandya CoA, Chintamani Total
1 Books (including Back Volumes) 157703 20278 20853 13211 212045
2 Pamphlets 11490 12 99 1265 12866
3 Thesis/Dissertations 11963 178 67 12208
4 Reports 19276 12 722 241 20251
5 Microfilms 68 68
6 Microfiche 167 167
7 Maps 78 20 98
8 CD ROM’s/DVD’s/CDs 321 203 314 153 991
9 e-Books 207 25 18 20 270
10 e-Journals 27 29 5 61
Total 201300 20579 22184 14962 259025

Details of new additions to UAS (B) Libraries during the year 2018-19

SL.No. Particulars GKVK Library CoA, Hassan CoA, Mandya CoA, Chintamani Total
1 Purchase (Books) 637 1472 557 574 3240
2 Gift Books 151 119 34 74 378
3 Pamphlets 54 24 78
4 Thesis/Dissertations 349 25 374
5 Reports 169 14 18 201
6 Bound Volumes of Periodicals 306 306
7 e-Books/CDs 29 18 21 68
8 e-Journals 5 5
9 CAB-CD-ROM database
Total 1671 1634 652 693 4650

UASB Libraries has received Journals on subscription, gift and exchange basis during the Year 2018-19 as detailed below :

SL.No. Particulars GKVK Library CoA, Hassan CoA, Mandya CoA, Chintamani Grand Total
1 Subscription of Foreign Journals 16 16
2 Subscription of Indian Journals 33 20 14 67
3 Journals received on Gift 60 4 24 88
4 Journals received on Exchange 38 38
5 Print and Online Journals 2 23 25
6 e-Journals 5 29 34
Total 154 29 24 61 252
Constituent Colleges
University of Agricultural Sciences, GKVK, Bengaluru
College of Sericulture, Chintamani
College of Agriculture, Hassan
College of Agriculture V.C. Farm, Mandya
University Library
College of Sericulture, Chintamani, Library Building
College of Agriculture, Hassan Library Building
Library, College of Agriculture V.C. Farm, Mandya

Constituent College Library Staff

Dr. N. Naganna

Assistant Librarian
Collage of Agriculture , Mandya

Dr. T.M. Ningaraj

Library In-Charge
Collage of Sericulture- Chintamani

Dr. A. Nataraj

Library In-Charge
Collage of Agriculture – Hassan

Dr. Yogesh

Library In-Charge
Collage of Agriculture – Chamarajanagar

ಗ್ರಂಥಾಲಯದ ಸೌಲಭ್ಯಗಳು

ವಿಶ್ವವಿದ್ಯಾನಿಲಯ ಗ್ರಂಥಾಲಯವು ೨೦೦೭ ರಿಂದ ಹಲವಾರು ವಿದ್ಯುನ್ಮಾನ ನಿಯತಕಾಲಿಕೆಗಳನ್ನು ಮತ್ತು ವಿದ್ಯುನ್ಮಾನ ಪುಸ್ತಕಗಳನ್ನು ಚಂದಾದಾರಿಕೆ ಮಾಡಿದೆ. ಎನ್.ಎ.ಐ.ಪಿ ಕಾರ್ಯಕ್ರಮದ ಅಡಿಯಲ್ಲಿ ಐ.ಸಿ.ಎ.ಆರ್‌ ಜೊತೆಗೆ ಸೆರಾ ಸೌಲಭ್ಯವನ್ನು ಒದಗಿಸಿದೆ. ಈ ಒಕ್ಕೂಟದ ಬಳಕೆದಾರರು ಕೃಷಿ ಕ್ಷೇತ್ರ ಮತ್ತು ಸಂಬಧಿತ ವಿಷಯಗಳಿಗೆ ಸಂಬಧಿಸಿದ ೪೦೦೦+ ನಿಯತಕಾಲಿಕೆಗಳನ್ನು ಪ್ರವೇಶಿಸಬಹುದು.

  • ಪುಸ್ತಕ ಎರವಲು ಸೌಲಭ್ಯಗಳು : ವಿಶ್ವವಿದ್ಯಾನಿಲಯದ ಗ್ರಂಥಾಲಯಎಲ್ಲಾ ಸದಸ್ಯರಿಗೆ ಛಾಯಾಚಿತ್ರ ಸಹಿತ ಗ್ರಂಥಾಲಯದ ಸದಸ್ಯರಿಗೆ ವಿದ್ಯುನ್ಮಾನ ಆರ್.ಎಫ್.ಐ.ಡಿ., ಕಾರ್ಡ್ ನೀಡುತ್ತಿದ್ದೆ. ಗಣಕೀಕೃತ ತಂತ್ರಜ್ಞಾನದ ಮೂಲಕ ಬಳಕೆದಾರರಿಗೆ ಪುಸ್ತಕಗಳನ್ನು ನೀಡಲಾಗುತ್ತದೆ ಮತ್ತು ಬಳಕೆದಾರರು ಅವನ/ಅವಳ ಸದಸ್ಯತ್ವದ ಸ್ಥಿತಿಯನ್ನು ನೋಡಬಹುದು.

 

  • ಪ್ರಚಲಿತ ನಿಯತಕಾಲಿಕೆಗಳ ಡೇಟಾಬೇಸ್ : ಬಳಕೆದಾರರಿಗೆ ನವೀಕೃತ ಮತ್ತು ಇತ್ತೀಚಿನ ವೈಜ್ಞಾನಿಕ ಮಾಹಿತಿಯನ್ನು ಒದಗಿಸುವ ಸಲುವಾಗಿ ಐ.ಸಿ.ಎ.ಆರ್., ನಿಂದ ಸೆರಾ (ಕೃಷಿಯಲ್ಲಿ ಇ-ಸಂಪನ್ಮೂಲಗಳ ಒಕ್ಕೂಟ) (CeRA) ಒಕ್ಕೂಟದಿಂದದೇಶ ಹಾಗೂ ವಿದೇಶಿ ನಿಯತಕಾಲಿಕೆಗಳನ್ನು ಒಳಗೊಂಡತೆ ಮುದ್ರಣ ನಿಯತಕಾಲಿಕೆಗಳನ್ನು ಗ್ರಂಥಾಲಯವು ಪಡೆಯುತ್ತಿದೆ.

 

  • ಪ್ರಚಲಿತಅಂತರ್ಜಾಲ ಜಾಗೃತಿ ಸೇವೆ : ಹೊಸ ಪುಸ್ತಕಗಳು, ನಿಯತಕಾಲಿಕೆಗಳು, ಪ್ರಬಂಧಗಳು, ವರದಿಗಳು ಮತ್ತು ಇತರ ಮಾಹಿತಿ ಮೂಲಗಳನ್ನು ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಮತ್ತು ಬೋಧಕರಿಗೆ ಇ-ಅಂಚೆ ಮೂಲಕ ತಿಳಿಸಲಾಗುವುದು ಮತ್ತು ಇವುಗಳ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇದರ ವೆಬ್‌ಸೈಟ್ ಮೂಲಕವು ಪ್ರವೇಶಿಸಬಹುದು.

 

  • ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಸಾಮಾನ್ಯ ವಿಷಯ : ಗ್ರಂಥಾಲಯದಲ್ಲಿ ಸಂಪನ್ಮೂಲಗಳನ್ನು ಹೇಗೆ ಪ್ರವೇಶಿಸುವುದು ಮತ್ತು ಹೊಸ ತಂತ್ರಜ್ಞಾನ ಬಗ್ಗೆ, ಅವುಗಳನ್ನು ಬಳಸಿಕೊಳ್ಳುವುದು ಹೇಗೆ ಎಂಬುದರಕುರಿತು ಬಳಕೆದಾರರಿಗೆ ಶಿಕ್ಷಣ ನೀಡಲು “ಗ್ರಂಥಾಲಯ ಮತ್ತು ಮಾಹಿತಿ ಸೇವೆಗಳ ವಿಷಯದ ಬಗ್ಗೆ CMC501 ೧(೦+೧)ಎಂಬ ಸಾಮಾನ್ಯ ವಿಷಯದ ತರಗತಿಗಳನ್ನು ನಡೆಸುತ್ತಿದೆ. ೨೦೧೦ರ ಶೈಕ್ಷಣಿಕ ನಿಯಮದ ಪ್ರಕಾರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಾಗುತ್ತಿದೆ.

 

  • ಸಾಮಾನ್ಯ ಪಠ್ಯ ಪುಸ್ತಕ ಬ್ಯಾಂಕ್ : ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗ್ರಂಥಾಲಯವು ಪ್ರತ್ಯೇಕ ಪುಸ್ತಕ ಬ್ಯಾಂಕ್‌ಅನ್ನು ಹೊಂದಿದೆ. ಈ ಸಾಮಾನ್ಯ ಪಠ್ಯ ಪುಸ್ತಕ ಬ್ಯಾಂಕ್‌ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಒಂದು ನಿರ್ದಿಷ್ಠ ಸೆಮಿಸ್ಟರ್‌ಗಳಿಗೆ ಪರಾಮರ್ಶೆಗಾಗಿ ಪುಸ್ತಕಗಳನ್ನು ನೀಡುತ್ತದೆ ಮತ್ತು ಪ್ರತಿ ಪುಸ್ತಕಕ್ಕೆ ರೂ. ೦೫ ನಾಮಮಾತ್ರ ಶುಲ್ಕ ಅನ್ವಯಿಸುತ್ತದೆ. ಪಠ್ಯ ಪುಸ್ತಕ ಬ್ಯಾಂಕ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಂಬಂಧಿತ ವಿಷಯಗಳ ವ್ಯಾಪ್ತಿಯಲ್ಲಿ ಪುಸ್ತಕಗಳ ಸಂಗ್ರಹವನ್ನು ಹೊಂದಿದೆ.

 

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪುಸ್ತಕ ಬ್ಯಾಂಕ್ : ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇಲ್ಲಿ ವ್ಯಾಸಾಂಗ ಮಾಡುತ್ತಿರುವ ಎಸ್.ಸಿ/ಎಸ್.ಟಿ. ವಿದ್ಯಾರ್ಥಿಗಳಿಗೆ ಗ್ರಂಥಾಲಯವು ಪ್ರತ್ಯೇಕ ಪುಸ್ತಕ ಬ್ಯಾಂಕ್‌ಅನ್ನು ಹೊಂದಿದೆ.ಈ ಪಠ್ಯ ಪುಸ್ತಕ ಬ್ಯಾಂಕ್‌ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಒಂದು ನಿರ್ದಿಷ್ಠ ಸೆಮಿಸ್ಟರ್‌ಗಳಿಗೆ ಪರಾಮರ್ಶೆಗಾಗಿ ಪುಸ್ತಕಗಳನ್ನು ನೀಡುತ್ತದೆ. ಪಠ್ಯ ಪುಸ್ತಕ ಬ್ಯಾಂಕ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಂಬಧಿತ ವಿಷಯಗಳ ವ್ಯಾಪ್ತಿಯಲ್ಲಿ ಪುಸ್ತಕಗಳ ಸಂಗ್ರಹವನ್ನು ಹೊಂದಿದೆ.

 

  • ಸಂಪನ್ಮೂಲ ವಿತರಣಾ ಸೇವೆ : ಸಂಪನ್ಮೂಲ ವಿತರಣಾಕೋರಿಕೆ ಕೃಷಿಯಲ್ಲಿನ ವಿದ್ಯುನ್ಮಾನ ಸಂಪನ್ಮೂಲಗಳಿಗಾಗಿ ಒಕ್ಕೂಟದ ಸೇವೆ (CeRA), ರಾಷ್ಟ್ರೀಯ ಕೃಷಿ ಸಂಶೋಧನಾ ವ್ಯವಸ್ಥೆಯಲ್ಲಿ (NARS)ಶೈಕ್ಷಣಿಕ ಮತ್ತು ಸಂಶೋಧನಾ ಸಮಯದಾಯಕ್ಕೆ CeRA ಸದಸ್ಯತ್ವ ಹೊಂದಿರುವ ವಿಶ್ವವಿದ್ಯಾನಿಲಯ/ಸಂಸ್ಥೆಯ ಗ್ರಥಾಲಯದಲ್ಲಿ ಚದಾದಾರರಾಗಿರುವ/ ಲಭ್ಯವಿರುವ ನಿಯತ ಕಾಲಿಕೆಗಳಿಂದ ಲೇಖನಗಳನ್ನು ಪಡೆಯಲು ಸಹಾಯ ಮಾಡುತ್ತದೆ.

 

  • ಅಂತರ ಗ್ರಥಾಲಯ ಸಾಲ : ಗ್ರಂಥಾಲಯದಲ್ಲಿ ಲಭ್ಯವಿರುವ ಕೆಲವು ಪ್ರಕಟಣೆಗಳನ್ನು ಬಳಕೆದಾರರು ವಿನಂತಿಸುತ್ತಾರೆ. ಆದ್ದರಿಂದ ಅವುಗಳನ್ನು ಇತರ ಸಂಸ್ಥೆಗಳಿದ ಸಾಲದ ಮೇಲೆ ಪಡೆಯಬಹುದು; ಅದೇರೀತಿ ಪ್ರಕಟಣೆಗಳನ್ನು ಇತರ ಸಂಸ್ಥೆಗಳಿಗೆ ಪರಸ್ಪರ ಸಹಕಾರಆಧಾರದ ಮೇಲೆ ನೀಡಲಾಗುವುದು.

 

  • ರೆಪ್ರೊಗ್ರಾಫಿಕ್ ಸೇವೆ : ಜೆರಾಕ್ಸ್ / ಪೋಟೋಕಾಪಿಯಿಂಗ್ ಸೇವೆಗಳನ್ನು ನಾಮಮಾತ್ರದ ವೆಚ್ಚದಲ್ಲಿ ಗ್ರಂಥಾಲಯದಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.

 

  • ರಾಮರ್ಶೆ ಸೇವೆ: ಗ್ರಂಥಾಲಯ ವೃತ್ತಿಪರರು ಸಂತಸದಿದ ಗ್ರಥಾಲಯದಲ್ಲಿ ಲಭ್ಯವಿರುವ ಮೂಲಗಳಿಂದ ಮಾಹಿತಿಯನ್ನು ಪತ್ತೆಹಚ್ಚಲು ಮತ್ತು ಪ್ರಸಾರ ಮಾಡಲು ಬಳಕೆದಾರರಿಗೆ ಸಹಾಯ ಮಾಡುತ್ತಾರೆ.

 

  • ಬಳಕೆದಾರ ಶಿಕ್ಷಣ : ವಿದ್ಯಾರ್ಥಿಗಳು, ಬೋಧಕರು, ವಿಜ್ಞಾನಿಗಳು ಮತ್ತು ವಿಷಯಗಳ ಕುರಿತು ಇತರ ಬಳಕೆದಾರರಿಗೆ ಗ್ರಂಥಾಲಯ ಶಿಕ್ಷಣ ಮತ್ತು ಬಳಕೆದಾರರ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು; ಮಾಹಿತಿ ಮೂಲಗಳು, ಸಾಹಿತ್ಯ ಹುಡುಕಾಟ, ಇಂಡೆಕ್ಸಿಗ್‌ ಮತ್ತು ಅಮೂರ್ತ ತಂತ್ರಗಳು, ಗಣಕೀಕೃತ ಮಾಹಿತಿ ಮತ್ತು ಮಾಹಿತಿಯ ಪ್ರಸಾರದ ಭಾಗವಾಗಿ ಗ್ರಂಥಾಲಯದಲ್ಲಿ ಲಭ್ಯವಿರುವ ವಿವಿಧ ಮೂಲಗಳ ಬಗ್ಗೆ ವಿವರವಾಗಿ ವಿವರಿಸಲು ವೃತ್ತಿಪರರು ಸಂತಸ ಪಡುತ್ತಾರೆ.

 

  • ವೃತ್ತ ಪತ್ರಿಕೆ ತುಣುಕುಗಳು : ವಿಶ್ವವಿದ್ಯಾನಿಲಯ ಗ್ರಂಥಾಲಯವು ತನ್ನ ಓದುಗರಿಗೆ ದಿನಪತ್ರಿಕೆ ತುಣುಕಗಳ ಸೇವೆಗಳನ್ನು ಒದಗಿಸಿದೆ, ಕನ್ನಡ ಮತ್ತು ಆಂಗ್ಲ ಭಾಷೆಯ ವಿವಿಧ ದಿನ ಪತ್ರಿಕೆಗಳಿಂದ ಕೃಷಿ ಕ್ಷೇತ್ರಕ್ಕೆ ಸಂಬಧಿಸಿದ ತುಣುಕುಗಳನ್ನು ಪಡೆದುತನ್ನ ಬಳಕೆದಾರರಿಗೆ ಇ-ಅಂಚೆ ಮೂಲಕ ಕಳುಹಿಸುತ್ತಿದೆ.

 

  • ವಿಷಯ ನಿರ್ವಹಣಾ ಸೇವೆ : ವಿಶ್ವವಿದ್ಯಾನಿಲಯ ಗ್ರಂಥಾಲಯವು ಒಂದು ನಿರ್ದಿಷ್ಟ ವಾರದಲ್ಲಿ ಹೊಸದಾಗಿ ಬಂದಿರುವ ಸಂಪನ್ಮೂಲಗಳ ವಿಷಯ ಪುಟಗಳನ್ನು ಇ-ಅಂಚೆ ಮುಖಾಂತರ ಗ್ರಂಥಾಲಯದ ಓದುಗರಿಗೆ ವಿಷಯ ನಿರ್ವಹಣೆ ಸೇವೆಯನ್ನು ಒದಗಿಸುತ್ತಿದೆ.

 

  • ಸಿಸಿಟಿವಿ : ಗ್ರಂಥಾಲಯದ ಪ್ರತಿಯೊಂದು ವಿಭಾಗಗಳ ಪರಿಣಾಮಕಾರಿ ಮೇಲ್ವಿಚಾರಣೆಗೆ ಮತ್ತು ಸುರಕ್ಷತೆಯ ದೃಷ್ಟಯಿಂದ, ಬಳಕೆದಾರರ ಚಲನವಲನಗಳನ್ನು ವೀಕ್ಷಿಸಿಲು ಗ್ರಂಥಾಲಯು ಸಿಸಿಟಿವಿ ಕಣ್ಗಾವಲುಗಳೊಂದಿಗೆ ಸುಸಜ್ಜಿತವಾಗಿದೆ.
Library Staff Details
Dr. Shivakrishna, S.D.
M.Sc., M.Phil. (Zoology),
M.L.I.Sc., M.Phil. (LIS),
PGDLAN., Ph.D.
Assistant Librarian
+91-9448606707
Recent Collections
    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ನವೆಂಬರ್ 15, 2024
    • ಸೈಟ್ ಅಂಕಿಅಂಶಗಳು